ಕಡವೆ ಬೇಟೆಯಾಡಿ ಮಾಂಸ‌ ಬಚ್ಚಿಟ್ಟಿದ್ದ ವ್ಯಕ್ತಿ ಅರೆಸ್ಟ್… ಮೈಸೂರು,ಡಿ,18,2019(..): ಕಡವೆ ಬೇಟೆಯಾಡಿ ಮಾಂಸ‌ ಬಚ್ಚಿಟ್ಟಿದ್ದ ವ್ಯಕ್ತಿಯನ್ನ ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದಾರೆ. ಮೈಸೂರಿನಲ್ಲಿ ಹುಣಸೂರಿನ ಲಕ್ಷ್ಮೀಪುರ ಗ್ರಾಮದ ಆನೆಚೌಕೂರಿನಲ್ಲಿ ಈ ಘಟನೆ ನಡೆದಿದೆ. ಸ್ವಾಮಿ ಎಂಬಾತ ಬಂಧಿತ ವ್ಯಕ್ತಿ. ಈತ ಕಡವೆಯನ್ನ ಬೇಟೆಯಾಡಿ ಸುಮಾರು 80 ಕೆಜಿ ಮಾಂಸವನ್ನ ತಂಬಾಕಿನ ಬ್ಯಾರನ್‌ನಲ್ಲಿ ಬಚ್ಚಿಟ್ಟಿದ್ದನು. ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಅರಣ್ಯ ಸಿಬ್ಬಂದಿಗಳು ಕಡವೆ ಮಾಂಸ, ತಲೆ, ಒಂದು ಮಚ್ಚು ವಶಕ್ಕೆ ಪಡೆದಿದ್ದಾರೆ. ಇನ್ನು ಪರಾರಿಯಾಗಿರುವ ನಾಲ್ವರ ಶೋಧಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. : - – – - -.