ಮೂರ್ನಾಲ್ಕು ದಿನಗಳಲ್ಲಿ ಮೈಸೂರಲ್ಲಿ ವಿಷ್ಣು ಸ್ಮಾರಕಕ್ಕೆ ಅಡಿಪಾಯ: ಭಾರತಿ ವಿಷ್ಣುವರ್ಧನ್ ಬೆಂಗಳೂರು, ಡಿಸೆಂಬರ್ 18, 2019 (..): ಮೂರ್ನಾಲ್ಕು ದಿನಗಳಲ್ಲಿ ವಿಷ್ಣು ಸ್ಮಾರಕಕ್ಕೆ ಅಡಿಪಾಯ ಕಾರ್ಯ ಆರಂಭವಾಗಲಿದೆ. ಈ ಕುರಿತು ಸ್ವತಃ ಸಿಎಂ ಭರವಸೆ ನೀಡಿದ್ದಾರೆ ಎಂದು ಭಾರತಿ ವಿಷ್ಣುವರ್ಧನ್​ ಹೇಳಿದ್ದಾರೆ. ಸಿಎಂ ಬಿಎಸ್‌ವೈ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದಾರೆ. ಈಗಾಗಲೇ ಸ್ಮಾರಕ ಕಾರ್ಯ ಮೈಸೂರಿನಲ್ಲಿ ನಡೆಯುತ್ತಿದೆ‌.‌ ಯಡಿಯೂರಪ್ಪ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ‌. ವಿಷ್ಣುವರ್ಧನ್ ಯಡಿಯೂರಪ್ಪ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.