ಕೊಯ್ಲಿ, ಕ್ರಿಸ್ಟಿಯಾನೊ ರೊನಾಲ್ಡೊ ಇದ್ದಂತೆ ಎಂದ ಬ್ರಿಯಾನ್ ಲಾರಾ ! ವಿಶಾಖಪಟ್ಟಣ, ಡಿಸೆಂಬರ್ 17, 2019 (..): ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಕ್ರಿಕೆಟ್‌ ಲೋಕದ ಕ್ರಿಸ್ಟಿಯಾನೊ ರೊನಾಲ್ಡೊ ಇದ್ದ ಹಾಗೆ ಎಂದು ವೆಸ್ಟ್‌ ಇಂಡೀಸ್‌ ಹಿರಿಯ ಕ್ರಿಕೆಟಿಗ ಬ್ರಯಾನ್‌ ಲಾರಾ ಹೊಗಳಿದ್ಧಾರೆ. ಪೋರ್ಚುಗಲ್‌ನ ಫುಟ್‌ಬಾಲ್‌ ತಾರೆ ರೊನಾಲ್ಡೊ ಅವರಂತೆ ಕೊಹ್ಲಿ ಕೂಡ ಆಟದ ಬಗ್ಗೆ ಅಪಾರ ಬದ್ಧತೆ ಹೊಂದಿದ್ದಾರೆ. ಫಿಟ್‌ನೆಸ್‌ ಕಾಪಾಡಿಕೊಳ್ಳುವ ವಿಚಾರದಲ್ಲಿ ಕೊಹ್ಲಿ, ಇತರ ಕ್ರಿಕೆಟಿಗರಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಮಾನಸಿಕವಾಗಿವೂ ಸದೃಢರಾಗಿದ್ದಾರೆ. ಅವರ ಆಟ ಪದಗಳಿಗೆ ನಿಲುಕದ್ದು. ಕೊಹ್ಲಿ ಅವರನ್ನು ಹೊರಗಿಟ್ಟು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ತಂಡವನ್ನು ಆಯ್ಕೆಮಾಡುವುದು ಅಸಾಧ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.