ಶ್ರೀಮುರಳಿಗೆ ಬರ್ತ್ ಡೇ ಸಂಭ್ರಮ: ಅಭಿಮಾನಿಗಳಿಗೆ ‘ಮದಗಜ’ ಪೋಸ್ಟರ್ ಗಿಫ್ಟ್ ! ಬೆಂಗಳೂರು, ಡಿಸೆಂಬರ್ 17, 2019 (..): ರಿಂಗ್ ಸ್ಟಾರ್ ಶ್ರೀಮುರಳಿಗೆ ಇಂದು ಜನ್ಮದಿನದ ಸಂಭ್ರಮ. ಇದರೊಂದಿಗೆ ಮದಗಜ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಹೆಬ್ಬುಲಿ ಖ್ಯಾತಿಯ ನಿರ್ಮಾಪಕ ಉಮಾಪತಿ ನಿರ್ಮಿಸುತ್ತಿರುವ ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಮದಗಜ ಸಿನಿಮಾದಲ್ಲಿ ಮುರಳಿ ನಾಯಕರಾಗಿದ್ದಾರೆ. ಈ ಸಿನಿಮಾದ ಪೋಸ್ಟರ್ ನ್ನು ಅವರ ಬರ್ತ್ ಡೇ ದಿನದ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಮದಗಜ ಸಿನಿಮಾ ಮುಗಿದ ಬಳಿಕ ಶ್ರೀಮುರಳಿ ಉಗ್ರಂ, ಕೆಜಿಎಫ್ ಸಿನಿಮಾ ಖ್ಯಾತಿಯ ಪ್ರಶಾಂತ್ ನೀಲ್ ಜತೆಗೆ ಸಿನಿಮಾ ಮಾಡಲಿದ್ದಾರೆ.