ಐಸಿಸಿ ಟೆಸ್ಟ್ ಕ್ರಿಕೆಟ್ ಕ್ರಮಾಂಕ: ಮುಂದುವರಿದ ಟೀಂ ಇಂಡಿಯಾ, ಕೊಯ್ಲಿ ಅಗ್ರ ಶ್ರೇಯಾಂಕ ದುಬೈ, ಡಿಸೆಂಬರ್ 17, 2019 (..): ನಾಯಕ ವಿರಾಟ್‌ ಕೊಹ್ಲಿ ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ವಿರಾಟ್‌ ಖಾತೆಯಲ್ಲಿ ಒಟ್ಟು 928 ಪಾಯಿಂಟ್ಸ್‌ ಇದೆ. ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಅವರಿಗಿಂತಲೂ 17 ಪಾಯಿಂಟ್ಸ್‌ ಹೆಚ್ಚು ಹೊಂದಿದ್ದಾರೆ. ಭಾರತದ ಚೇತೇಶ್ವರ ಪೂಜಾರ (791) ಮತ್ತು ಅಜಿಂಕ್ಯ ರಹಾನೆ (759) ಅವರು ಕ್ರಮವಾಗಿ ನಾಲ್ಕು ಮತ್ತು ಆರನೇ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಇನ್ನು ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿದೆ. ಕೊಹ್ಲಿ ಪಡೆ ಒಟ್ಟು 360 ಪಾಯಿಂಟ್ಸ್‌ ಹೊಂದಿದೆ. ಆಸ್ಟ್ರೇಲಿಯಾ (216), ಶ್ರೀಲಂಕಾ (80), ನ್ಯೂಜಿಲೆಂಡ್‌ (60) ಮತ್ತು ಇಂಗ್ಲೆಂಡ್‌ (56) ಕ್ರಮವಾಗಿ ಎರಡರಿಂದ ಐದನೇ ಸ್ಥಾನಗಳಲ್ಲಿವೆ.