ಹೆಚ್.ವಿಶ್ವನಾಥ್ ಸೋಲಿಗೆ ಯೋಗೇಶ್ವರ್ ಕಾರಣ ಹೇಳಿಕೆ: ಜಿ.ಟಿ ದೇವೇಗೌಡರ ವಿರುದ್ದ ಹುಣಸೂರು ತಾಲೂಕು ಒಕ್ಕಲಿಗ ಮುಖಂಡ ವಾಗ್ದಾಳಿ… ಮೈಸೂರು,ಡಿ,14,2019(..): ಉಪಚುನಾವಣಾಯಲ್ಲಿ ವಿಶ್ವನಾಥ್ ಸೋಲಿಗೆ ಸಿ‌‌.ಪಿ ಯೋಗೇಶ್ವರ್ ಕಾರಣ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಜಿ.ಟಿ ದೇವೇಗೌಡರ ವಿರುದ್ದ ಗುಡುಗಿರುವ ಹುಣಸೂರು ತಾಲೂಕು ಒಕ್ಕಲಿಗ ಮುಖಂಡ ಸಿಟಿ ರಾಜಣ್ಣ, ಜಿ ಟಿ ದೇವೇಗೌಡ ಹೊಟ್ಟೆ ಕಿಚ್ಚಿನ ಮನುಷ್ಯ. ವಿಶ್ವನಾಥ್ ಸೋಲಿಗೆ ಜಿಟಿಡಿ ಕೂಡಾ ಕಾರಣ ಎಂದು ವಾಗ್ದಾಳಿ ನಡೆಸಿದರು. ಇಂದು ಹುಣಸೂರು ಒಕ್ಕಲಿಗ ವೇದಿಕೆ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಣಸೂರು ತಾಲೂಕು ಒಕ್ಕಲಿಗ ಮುಖಂಡ ಸಿಟಿ ರಾಜಣ್ಣ, ಜಿ ಟಿ ದೇವೇಗೌಡ ಹೊಟ್ಟೆ ಕಿಚ್ಚಿನ ಮನುಷ್ಯ. ಈ ರೀತಿ ಸುಳ್ಳು ಹೇಳಿಕೆ ಗಳನ್ನು ನೀಡುವುದೇ ಅವರ ಚಾಳಿ. ಅವರ ಕುಟುಂಬ ಬಿಟ್ಟು ಯಾರ ಬೆಳವಣಿಗೆ ಸಹಿಸುವುದಿಲ್ಲ ಎಂದು ಹರಿಹಾಯ್ದರು. ಚುನಾವಣಾ ಪ್ರಚಾರಕ್ಕಾಗಿ ಸಿಪಿ ಯೋಗೇಶ್ವರ್ ಆಗಮಿಸಿದ್ರು. ಯೋಗೇಶ್ವರ್ ವಿಚಾರ ಮಾತನಾಡಲು ಜಿಟಿಡಿ ಯಾರು…? ಎಂದು ಪ್ರಶ್ನಿಸಿದ ರಾಜಣ್ಣ, ಜಿಟಿಡಿ ಜೆಡಿಎಸ್ ಅಭ್ಯರ್ಥಿ ಮನೆ ಹಾಳು ಮಾಡಿದ್ದಾರೆ. ಜಿಟಿಡಿ ಒಂದು ಪಕ್ಷದಲ್ಲಿ ಇದ್ದು ಇವರೇ ಕಾಂಗ್ರೆಸ್ ಅಭ್ಯರ್ಥಿ ಗೆ ಸಹಕಾರ ನೀಡಿದ್ದಾರೆ. ನನಗೂ ಕೂಡ 2013ರಲ್ಲಿ ಟಿಕೆಟ್ ತಪ್ಪಿಸಿದ್ರು. ತೊಟ್ಟಲು ತೂಗುವುದು ಮಗುವನ್ನು ಚಿವುಟುವುದು ಇವರ ಚಾಳಿ. ವಿಶ್ವನಾಥ್ ಸೋಲಿಗೆ ಜಿಟಿಡಿ ಕೂಡಾ ಕಾರಣ ಎಂದು ಆರೋಪಿಸಿದರು. ಬಿಜೆಪಿಯಲ್ಲಿದ್ದಾಗ ಎಲ್ಲಾ ಸಂಪನ್ಮೂಲಗಳನ್ನು ಪಡೆದಿದ್ದಾರೆ. ಸಿ ಪಿ ಯೋಗೇಶ್ವರ್ ರವರು ಸಮುದಾಯಕ್ಕೆ ತಮ್ಮದ್ದೇ ಅದ ಕೊಡುಗೆ ನೀಡಿದ್ದಾರೆ ಎಂದು ಜಿ ಟಿ ದೇವೇಗೌಡರ ವಿರುದ್ಧ ಹುಣಸೂರು ತಾಲೂಕು ಒಕ್ಕಲಿಗ ಮುಖಂಡ ಸಿಟಿ ರಾಜಣ್ಣ ವಾಗ್ದಾಳಿ ನಡೆಸಿದರು. : - - – .- - -