ಡಿ.21ಕ್ಕೆ ಕೆಜಿಎಫ್-2 ಫಸ್ಟ್ ಲುಕ್ ರಿಲೀಸ್ ಬೆಂಗಳೂರು, ಡಿಸೆಂಬರ್ 14, 2019 (..): ಕೆಜಿಎಫ್​ 2 ತಂಡದಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಡಿಸೆಂಬರ್​ 21 ರಂದು ಕೆಜಿಎಫ್​ 2 ಫಸ್ಟ್ ಲುಕ್ ಹೊರಬೀಳಲಿದೆ. 21 ರಂದು ಸಂಜೆ 5.45 ಕ್ಕೆ ಬಹುನಿರೀಕ್ಷಿತ ಕೆಜಿಎಫ್​ 2 ಫಸ್ಟ್ ಲುಕ್​ ಲಾಂಚ್ ಆಗಲಿದೆ. ಈ ವಿಷ್ಯವನ್ನ ಸ್ವತ: ಹೊಂಬಾಳೆ ಫಿಲ್ಮ್​ ಫೇಸ್​​ಬುಕ್​ ಪೇಜ್​ನಲ್ಲಿ ಅಫೀಶಿಯಲ್​​ ಆಗಿ ಅನೌನ್ಸ್ ಮಾಡಲಾಗಿದೆ. ಈ ಮೂಲಕ ಸಾಕಷ್ಟು ದಿನಗಳಿಂದ ಕಾದಿದ್ದ ಅಭಿಮಾನಿಗಳಿಗೆ ಶೀಘ್ರವೇ ಸಿಹಿ ಚೂರೊಂದು ಸಿಗಲಿದೆ.