ಬಾಂಬ್ ಸ್ಪೋಟ ಘಟನೆಯಲ್ಲಿ ಬಿಜೆಪಿ ರಾಜಕೀಯ ಖಂಡಿಸುತ್ತೇನೆ-ಸಿಎಂ ಸಿದ್ದರಾಮಯ್ಯ. ಮೈಸೂರು,ಮಾರ್ಚ್,2,2024(..):ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಬಿಜೆಪಿಯವರು ರಾಜಕೀಯ ಮಾಡುತ್ತಾರೆ. ಇದನ್ನ ನಾನು ಖಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಹಿಂದೆ ಬಾಂಬ್ ಸ್ಪೋಟ ಪ್ರಕರಣಗಳು ನಡೆದಿಲ್ವಾ ಪ್ರಕರಣದ ಬಗ್ಗೆ ಬಿಜೆಪಿಯವುರ ರಾಜಕೀಯ ಮಾಡುತ್ತಾರೆ. ನಾವು ಈ ವಿಚಾರದಲ್ಲಿ ರಾಝಕೀಯ ಮಾಡಲು ಹೋಗಲ್ಲ. ಘಟನೆ ರಾಜಕೀಯ ಮಾಡುವುದನ್ನ ಖಂಡಿಸುತ್ತೇನೆ ಎಂದರು. ಆರೋಪಿ ಬಸ್ ನಿಂದ ಇಳಿದು ಹೋಟೆಲ್ ಗೆ ಹೋಗಿದ್ದಾನೆ. ಕಪ್ಪು ಬಣ್ಣದ ಮಾಸ್ಕ್ ಹಾಕಿಕೊಂಡು ಬಂದಿದ್ದು, ಟೋಪಿ ಹಾಕಿಕೊಂಡು ಬರುವ ದೃಶ್ಯ ಸೆರೆಯಾಗಿದೆ. ಟೈಮರ್ ಸೆಟ್ ಮಾಡಿ ಬಾಂಬ್ ಸ್ಪೋಟಿಸಿದ್ದಾನೆ. ಆರೋಪಿಗೆ ಕಠಿಣ ಶಿಕ್ಷ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. : - ’- – - – .