ಮನೆ ಬದಲಾಯಿಸಿರಬಹುದು: ಆದರೆ ಮನಸ್ಸು ಬದಲಿಸಲಾಗಲ್ಲ – ಬಿಜೆಪಿ ಶಾಸಕ ಬಿ.ಸಿ ಪಾಟೀಲ್… ಬೆಂಗಳೂರು,ಡಿ,13,2019(..): ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಆರೋಗ್ಯ ವಿಚಾರಿಸಿದ ಹಿರೇಕೆರೂರು ಬಿಜೆಪಿ ಶಾಸಕ ಬಿ.ಸಿ ಪಾಟೀಲ್, ನಾವು ಪಕ್ಷ ಬದಲಾಯಿಸಿದ್ದೇವೆ. ಮಾನವೀಯತೆ, ಮನುಷ್ಯತ್ವ ಮರೆಯೋಕಾಗಲ್ಲ ಎಂದು ನುಡಿದರು. ಮಾಜಿ ಸಿಎಂ ಸಿದ್ದರಾಮಯ್ಯಗೆ ಅಂಜಿಯೋ ಪ್ಲಾಸ್ಟಿ ಮಾಡಲಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಬಿಜೆಪಿ ಶಾಸಕ ಬಿ.ಸಿ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧರಾಮಯ್ಯ ಅವರ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಶಾಸಕ ಬಿ.ಸಿ ಪಾಟೀಲ್, ನಾವು ಪಕ್ಷ ಬದಲಾಯಿಸಿದ್ದೇವೆ, ಆದರೆ ಮಾನವೀಯತೆಯನ್ನು ಮನುಷ್ಯತ್ವವನ್ನು ಮರೆಯೋಕಾಗಲ್ಲ. ಮನೆ ಬದಲಾಯಿಸಿರಬಹುದು, ಆದರೆ ಮನಸ್ಸು ಬದಲಾಯಿಸೋಕಾಗಲ್ಲ. ರಾಜಕೀಯವೇ ಬೇರೆ, ಸಂಬಂಧಗಳೇ ಬೇರೆ. ಹೀಗಾಗಿ ನಮ್ಮ ಮಾಜಿ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ ಎಂದು ತಿಳಿಸಿದರು. : -. ----