ಮನೆ ಕೆಲಸಕ್ಕೆಂದು ಯುವತಿ ಕರೆತಂದು ಅತ್ಯಾಚಾರ: ಆರೋಪಿ ಹಾಗೂ ಆತನ ಪತ್ನಿ ಬಂಧನ… ಬೆಂಗಳೂರು,ಡಿ,14,2019(..): ಮನೆ ಕೆಲಸಕ್ಕೆಂದು ಯುವತಿಯನ್ನ ಕರೆತಂದು ಆಕೆಯ ಮೇಲೆ ಅತ್ಯಾಚಾರ ಮಾಡಿ ದೌರ್ಜನ್ಯವೆಸಗಿದ ಆರೋಪಿಯನ್ನ ನಗರದ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೋರ ಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಸ್ಲಾಮ್ ಪರ್ವೇಜ್ ಎಂಬಾತನೇ ಈ ಕೃತ್ಯವೆಸಗಿರುವ ಆರೋಪಿ. ಪರ್ವೇಜ್ ಮನೆ ಕೆಲಸಕ್ಕೆಂದು ಬಿಹಾರದಿಂದ ಯುವತಿಯನ್ನ ಕರೆತಂದಿದ್ದ. ಬಳಿಕ ಕೋರಮಂಗಲದ ಮನೆಯೊಂದರಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ ಐರನ್ ಬಾಕ್ಸ್ ನಿಂದ ಸುಟ್ಟಿದ್ದಾನೆ. ಈ ಕುರಿತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿ ಇಸ್ಲಾಂ ಪರ್ವೇಜ್ ಮತ್ತು ಆತನ ಪತ್ನಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. : - - --