ಆದಿಚುಂಚನಗಿರಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬಿಎಸ್ ಯಡಿಯೂರಪ್ಪ: ಹುಣ್ಣಿಮೆ ಪೂಜೆಯಲ್ಲಿ ಭಾಗಿ… ಮಂಡ್ಯ,ಡಿ,12,2019(..): ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಅದಿಚುಂಚನಗಿರಿಗೆ ಭೇಟಿ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಜೆಡಿಎಸ್ ಶಾಸಕ ಸುರೇಶ್ ಗೌಡ ಸ್ವಾಗತಿಸಿದರು. ಬಳಿಕ ಜೆಡಿಎಸ್ ಶಾಸಕ ಸುರೇಶ್ ಗೌಡ ಸಿಎಂ ಬಿಎಸ್ ಯಡಿಯೂರಪ್ಪರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಸಿಎಂ ಬಿಎಸ್ ಯಡಿಯೂರಪ್ಪ ಮಠದ ಶ್ರೀ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದರು. ತದನಂತರ ಕಾಲಭೈರವೇಶ್ವರನ ದರ್ಶನ ಪಡೆದರು. ಸಿಎಂ ಬಿಎಸ್ ವೈ ಗೆ ಶಾಸಕ. ನಾರಾಯಣಗೌಡ, ಕಂದಾಯ ಸಚಿವ ಆರ್.ಅಶೋಕ್ ಸಾಥ್ ನೀಡಿದರು. ನಿರ್ಮಲಾನಂದನಾಥ ಶ್ರೀಗಳ ನಡೆದ ಹುಣ್ಣಿಮೆ ಪೂಜೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಭಾಗಿಯಾದರು. ನಂತರ ಮಠದಲ್ಲೇ ಉಪಹಾರ ಸೇವಿಸಿದರು. : - –-- -