69ನೇ ವಸಂತಕ್ಕೆ ಕಾಲಿಟ್ಟ ಸೂಪರ್ ಸ್ಟಾರ್ ತಲೈವಾ ಚೆನ್ನೈ, ಡಿಸೆಂಬರ್ 12, 2019 (..): ಸೂಪರ್​ ಸ್ಟಾರ್​ ರಜನಿಕಾಂತ್​ ಇಂದು 69ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನಾದ್ಯಂತ ಅಭಿಮಾನಿಗಳು ರಜನಿ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಜನ್ಮದಿನದಂದು ಸ್ಟಾರ್​ ನಟರ ಸಿನಿಮಾ ತಂಡದಿಂದ ಏನಾದರೂ ವಿಶೇಷ ಉಡುಗೊರೆ ಸಿಗುವುದು ವಾಡಿಕೆ. ಅದೇ ರೀತಿ, ಇಂದು ರಜನಿ ನಟನೆಯ ‘ದರ್ಬಾರ್​’ ಸಿನಿಮಾದ ಟ್ರೈಲರ್​ ಇಂದು ರಿಲೀಸ್​ ಆಗುವ ಸಾಧ್ಯತೆ ಇದೆ. ಎರಡು ವರ್ಷಗಳ ಹಿಂದೆ ಜನ್ಮದಿನದ ಅಂಗವಾಗಿ ರಜನಿ ಐದು ದಿನಗಳ ಕಾಲ ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಈ ಮೂಲಕ ಪಕ್ಷ ಕಟ್ಟುವ ಕೆಲಸಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.