ಯಶವಂತಪುರ ಕ್ಷೇತ್ರ: ಗೆಲುವಿನತ್ತ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ … ಬೆಂಗಳೂರು, ಡಿ,9,2019(..): ಬಿಜೆಪಿ ಮತ್ತು ಜೆಡಿಎಸ್ ನಡುವಿನ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದ್ದ ಕ್ಷೇತ್ರ ಯಶವಂತಪುರದಲ್ಲಿ ಬಿಜೆಪಿಯ ಎಸ್. ಟಿ. ಸೋಮಶೇಖರ್ ಗೆಲುವು ಬಹುತೇಕ ಖಚಿತವಾಗಿದೆ. ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ 19,877 ಮತಗಳ ಅಂತರದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಎಸ್.ಟಿ ಸೋಮಶೇಖರ್ 1,12,410 ಮತಗಳನ್ನ ಪಡೆದಿದ್ದರೇ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡಗೆ 92,533 ಮತಗಳು ಲಭಿಸಿವೆ. ಮೊದ ಮೊದಲು ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಮುನ್ನಡೆ ಸಾಧಿಸಿದ್ದರು. ನಂತರ ಮುನ್ನಡೆ ಕಾಯ್ದು ಕೊಂಡ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಗೆಲುವಿನತ್ತ ದಾಪುಗಾಲು ಇಟ್ಟಿದ್ದಾರೆ. ಬಿಜೆಪಿಯಿಂದ ಎಸ್. ಟಿ. ಸೋಮಶೇಖರ್, ಕಾಂಗ್ರೆಸ್‌ಸಿಂದ ಪಾಳ್ಯ ನಾಗರಾಜ್, ಜೆಡಿಎಸ್‌ನಿಂದ ಟಿ. ಎನ್. ಜವರಾಯಿ ಗೌಡ ಅಭ್ಯರ್ಥಿಗಳಾಗಿದ್ದರು. : - - – - .