ಮತ್ತೆ ಬಿಜೆಪಿಗೆ ವಾಪಸ್ ಬರುವಂತೆ ‘ಕೈ’ ಅಭ್ಯರ್ಥಿ ರಾಜುಕಾಗೆಗೆ ವೇದಿಕೆಯಲ್ಲೇ ಬಹಿರಂಗ ಆಹ್ವಾನ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ… ಬೆಳಗಾವಿ,ಡಿ,8,2019(..): ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ತೊರದು ಕಾಂಗ್ರೆಸ್ ಸೇರ್ಪಡೆಗೊಂಡು ಕಾಗವಾಡ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜುಕಾಗೆ ಅವರಿಗೆ ಮತ್ತೆ ಬಿಜೆಪಿಗೆ ಬರುವಂತೆ ಡಿಸಿಎಂ ಲಕ್ಷ್ಮಣ್ ಸವದಿ ಬಹಿರಂಗ ಆಹ್ವಾನ ನೀಡಿದ್ದಾರೆ. ಕಾಗವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರಾಜುಕಾಗೆ ಮತ್ತು ಡಿಸಿಎಂ ಲಕ್ಷ್ಮಣ್ ಸವದಿ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಡಿಸಿಎಂ ಲಕ್ಷ್ಮಣ ಸವದಿ ರಾಜುಕಾಗೆ ಅವರಿಗೆ ಮತ್ತೆ ಬಿಜೆಪಿಗೆ ಬರುವಂತೆ ವೇದಿಕೆಯಲ್ಲಿ ಬಹಿರಂಗ ಆಹ್ವಾನ ನೀಡಿದ್ದಾರೆ. ನಮ್ಮನ್ನ ಬಿಟ್ಟು ಹೋಗಿ ನೀನು ಸಹಕಾರಿ ಕ್ಷೇತ್ರಕ್ಕೆ ಬರಬೇಡ. ಮೂರುವರೆ ವರ್ಷ ಕಳೆಯಲಿ ಮುಂದೆ ನೋಡೋಣ. ಕಾಂಗ್ರೆಸ್ ಬಿಟ್ಟು ಮತ್ತೆ ಬಿಜೆಪಿಗೆ ಬಾ. ಅಥಣಿಯಲ್ಲಿ ಮಹೇಶ್ ಕುಮುಟಳ್ಳಿ ಇರುತ್ತಾರೆ. ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಇರುತ್ತಾರೆ. ನಿನಗೆ ಒಂದು ಹೊಸ ಜಾಗ ಹುಡುಕಿಕೊಡುತ್ತೇನೆ. ಕಾಂಗ್ರೆಸ್ ಬಿಟ್ಟು ಮರಳಿ ಬಿಜೆಪಿಗೆ ಬಾ ಎಂದು ಡಿಸಿಎಂ ಲಕ್ಷ್ಮಣ್ ಸವದಿ ರಾಜುಕಾಗೆ ಅವರಿಗೆ ಹೇಳಿದರು. : - – - - – –