ಸಿದ್ದರಾಮಯ್ಯ ನಾಯಕತ್ವದ ಅಂತ್ಯಕಾಲ ಬಂದಿದೆ: ಮೊದಲು ನಿಮ್ಮ ಸ್ಥಾನ ಉಳಿಸಿಕೊಳ್ಳಿ- ಸಚಿವ ಜಗದೀಶ್ ಶೆಟ್ಟರ್ ಟಾಂಗ್…. ಹುಬ್ಬಳ್ಳಿ,ಡಿ,8,2019(..): ವಿಪಕ್ಷ ಸ್ಥಾನ ಮುಟ್ಟುಗೋಲು ಹಾಕಿಕೊಳ್ತಾರೆ. ಬಿಜೆಪಿ ಬಗ್ಗೆ ಮಾತನಾಡುವುದನ್ನ ಬಿಡಿ. ಮೊದಲು ನಿಮ್ಮ ಸ್ಥಾನ ಉಳಿಸಿಕೊಳ್ಳಿ ಸಿದ್ಧರಾಮಯ್ಯನವರೇ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಟಾಂಗ್ ನೀಡಿದರು. ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ನಾಯಕತ್ವದ ಅಂತ್ಯಕಾಲ ಬಂದಿದೆ ಸಿದ್ಧರಾಮಯ್ಯ ಅಹಂಕಾರದಿಂದ ಮಾತನಾಡ್ತಿದ್ದಾರೆ. ಅವರು ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಈ ಹಿಂದೆ ಸಿದ್ಧರಾಮಯ್ಯ ಅವರು ನೀಡಿದಂತಹ ಯೋಜನೆಗಳು ಜನಸಾಮಾನ್ಯರಿಗೆ ಯಾವುದೂ ತಲುಪದೆ ಮಧ್ಯದಲ್ಲಿಯೇ ದರೋಡೆಯಾಗಿವೆ. ಸಿದ್ದರಾಮಯ್ಯಗೆ ಜನರ ನಾಡಿಮಿಡಿತ ಅರ್ಥವಾಗಿಲ್ಲ ಎಂದು ನುಡಿದರು. ಉಪಚುನಾವಣೆಯ ಬಳಿಕ ವಿಪಕ್ಷ ಸ್ಥಾನ ಮುಟ್ಟುಗೋಲು ಹಾಕಿಕೊಳ್ತಾರೆ. ಸಿದ್ಧರಾಮಯ್ಯ ಮೊದಲು ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿ. ಅದನ್ನ ಬಿಟ್ಟು ಬಿಜೆಪಿ ಬಗ್ಗೆ ಸುಖಾಸುಮ್ಮನೇ ಮಾತನಾಡಬೇಡಿ ಎಂದು ಜಗದೀಶ್ ಶೆಟ್ಟರ್ ಟಾಂಗ್ ನೀಡಿದರು. ಉಪಚುನಾವಣಾ ಫಲಿತಾಂಶ ನಂತರ ಬಿಜೆಪಿ ಸರ್ಕಾರವೇ ಮುಂದುವರೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ನವರು ಕೂಸು ಹುಟ್ಟುವ ಮುಂಚೆಯೇ ಕುಲಾಯಿ ಹೊಲಿಸುತ್ತಿದ್ದಾರೆ. ಚುನಾವಣಾ ಫಲಿತಾಂಶ ಬರುವ ಮುಂಚಿಯೇ ಅವರು ಅಧಿಕಾರದ ಕನಸು ಕಾಣುತ್ತಿದ್ದಾರೆ ಎಂದು ಶೆಟ್ಟರ್ ಟೀಕಿಸಿದರು. : – - – - - .