ಅಂಗಡಿ ವ್ಯವಹಾರ ಮುಗಿಸಿ ವಾಪಸ್ಸು ಹೋಗುತ್ತಿದ್ದ ಮಾಲೀಕನಿಗೆ ಕಾದಿತ್ತು ಶಾಕ್… ಮಂಡ್ಯ,ಡಿ,7,2019(..): ಗಿರವಿ ಅಂಗಡಿ ಮಾಲೀಕನೋರ್ವ ರಾತ್ರಿ ಅಂಗಡಿ ವ್ಯವಹಾರ ಮುಗಿಸಿ ವಾಪಸ್ಸು ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆಗೈದು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿ ನಡೆದಿದೆ. ಪಾಂಡವಪುರ ತಾಲೂಕಿನ ಶಂಭೂನಹಳ್ಳಿ ಬಳಿ ತಡರಾತ್ರಿ ಈ ಘಟನೆ ನಡೆದಿದೆ. ಜಂಬೂ ಜರೋರಿ ಹಲ್ಲೆಗೊಂಡು ದರೋಡೆಗೊಳಗಾದ ಗಿರವಿ ಅಂಗಡಿ ಮಾಲೀಕ. ಜಂಬೂ ಜರೋರಿ ರಾತ್ರಿ ಅಂಗಡಿ ವ್ಯವಹಾರ ಮುಗಿಸಿ ವಾಪಸ್ಸು ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ ಬೈಕ್ ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದು ಮಾಲೀಕನ ಬಳಿ ಇದ್ದ ಚಿನ್ನಾಭರಣ ಸೇರಿದಂತೆ ಹಣ ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪಾಂಡವಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈಕುರಿತು ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. : - - – - – .