ಅತ್ಯಾಚಾರಿಗಳಿಗೆ ಕ್ಷಮಾಧಾನ ನೀಡುವ ಪ್ರಶ್ನೆಯೇ ಇಲ್ಲ- ರಾಷ್ಟ್ರಪತಿ ರಮನಾಥ್ ಕೋವಿಂದ್ … ನವದೆಹಲಿಡಿ,6,2019(..): ಹೈದರಬಾದ್ ನಲ್ಲಿ ಪಶುವೈದ್ಯೆ ದಿಶಾ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಗಳನ್ನ ಪೊಲೀಸರು ಎನ್ ಕೌಂಟರ್ ಮಾಡಿದ ಬೆನ್ನಲ್ಲೆ ಅತ್ಯಾಚಾರಿಗಳಿಗೆ ಕ್ಷಮಾಧಾನ ನೀಡುವ ಪ್ರಶ್ನೆಯೇ ಇಲ್ಲ ಎಂದು ರಾಷ್ಟ್ರಪತಿ ರಮನಾಥ್ ಕೋವಿಂದ್ ತಿಳಿಸಿದ್ದಾರೆ. ಇಂದು ಈ ಬಗ್ಗೆ ಮಾತನಾಡಿದ ರಾಷ್ಟ್ರಪತಿ ರಮನಾಥ್ ಕೋವಿಂದ್, ಅತ್ಯಾಚಾರಿಗಳ ಕ್ಷಮಾಧಾನದ ಅರ್ಜಿಗಳನ್ನ ಪರಿಗಣಿಸುವುದೇ ಇಲ್ಲ. ಇಂತಹ ಅರ್ಜಿಗಳ ಬಗ್ಗೆ ಸಂಸತ್ ಮರುಪರಿಶೀಲಿಸಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಕ್ಷಮಾಧಾನ ಅರ್ಜಿಯನ್ನ ಸ್ವೀಕರಿಸುವುದಿಲ್ಲ. ಸುಪ್ರೀಂಕೋರ್ಟ್ ತೀರ್ಪು ಅಂತಿಮ ಎಂದು ಹೇಳಿದ್ದಾರೆ. ಇಡೀ ದೇಶವೇ ಬೆಚ್ಚಿ ಬೀಳಿಸಿದ್ದ ಪಶು ವೈದ್ಯೆ ದಿಶಾ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಘಟನೆ ನಡೆದ ಸ್ಥಳದಲ್ಲಿಯೇ ಎನ್ ಕೌಂಟರ್ ಮಾಡಿದ್ದರು. : - – – -