ಪಶುವೈದ್ಯೆ ಅತ್ಯಾಚಾರ ಆರೋಪಿಗಳ ಎನ್ ಕೌಂಟರ್ ವಿಚಾರ: ಕಾನೂನಿನ ಪ್ರಕಾರವೇ ಕ್ರಮ ಆಗಿದೆ-ಡಿಸಿಎಂ ಗೋವಿಂದ ಕಾರಜೋಳ… ಬೆಂಗಳೂರು,ಡಿ,6,2019(..): ಪಶುವೈದ್ಯೆ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿಗಳನ್ನ ಎನ್ ಕೌಂಟರ್ ಮಾಡಿದ ಪೊಲೀಸರ ಕಾರ್ಯವನ್ನ ಡಿಸಿಎಂ ಗೋವಿಂದ ಕಾರಜೋಳ ಸ್ವಾಗತಿಸಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿರುವ ಡಿಸಿಎಂ ಗೋವಿಂದ ಕಾರಜೋಳ, ಕಾನೂನಿನ ಪ್ರಕಾರವೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಾಹಿತಿ ಪ್ರಕಾರ. ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಪೊಲೀಸರ ವಿರುದ್ದವೇ ಆರೋಪಿಗಳು ತಿರುಗಿ ಬಿದ್ದಿದ್ದು, ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಅನಿವಾರ್ಯವಾಗಿ ಎನ್ ಕೌಂಟರ್ ಮಾಡಿದ್ದಾರೆ. ಇದು ಅತ್ಯಾಚಾರಿಗಳಿಗೆ ತಕ್ಕ ಪಾಠವಾಗಲಿ ಎಂದು ನುಡಿದರು. : - –- –-