ಅಪ್ಪು ವರ್ಕೌಟ್ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ! ಬೆಂಗಳೂರು, ಡಿಸೆಂಬರ್ 06, 2019 (..):ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ವರ್ಕೌಟ್ ವಿಡಿಯೋವೊಂದು ವೈರಲ್ ಆಗಿದೆ. ವರ್ಕೌಟ್ ವಿಡಿಯೋನ ಪುನೀತ್ ರಾಜ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕ್ರಾಸ್ ಎಕ್ಸರ್ಸೈಸ್ ಮತ್ತು ರೋಪ್ ಎಕ್ಸರ್ಸೈಸ್ ಗಳನ್ನ ಪುನೀತ್ ಮಾಡಿದ್ದಾರೆ. ಫಿಟ್ನೆಸ್ ಮೇನ್ ಟೇನ್ ಮಾಡಲು ಪ್ರತಿ ದಿನ ಸುಮಾರು 10 ಕಿ.ಮಿ ಓಡುತ್ತಾರೆ ಪುನೀತ್ ರಾಜ್ ಕುಮಾರ್. ಶೂಟಿಂಗ್ ಇಲ್ಲದೇ ಇದ್ದರೂ, ವರ್ಕೌಟ್ ನ ಮಾತ್ರ ಅಪ್ಪು ಮಿಸ್ ಮಾಡುವುದಿಲ್ಲ.