ಸಿದ್ಧರಾಮಯ್ಯರನ್ನ ಬಿಜೆಪಿಗೆ ಕರೆತರುತ್ತೇನೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತೆ..? ಬಾಗಲಕೋಟೆ,ಡಿ,5,2019(..): ಸಿದ್ಧರಾಮಯ್ಯರನ್ನ ಬಿಜೆಪಿಗೆ ಕರೆ ತರುತ್ತೇನೆ ಶೀಘ್ರದಲ್ಲೇ ಬಿಜೆಪಿಗೆ ಬರ್ತಾರೆ ಎಂದು ಹೇಳಿಕೆ ನೀಡಿದ ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಇದಕ್ಕೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಅವರಿಗೆ ಜವಾಬ್ದಾರಿ ಇದ್ದಿದ್ದರೇ ಈ ರೀತಿ ಮಾತನಾಡುತ್ತಿರಲಿಲ್ಲ ರಮೇಶ್ ಜಾರಕಿಹೊಳಿಗೆ ಐಡಿಯಾಲಜಿ ಇಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ ನೀಡಿದರು. ಬಾಗಲಕೋಟೆ ಜಿಲ್ಲೆ ಕೆರೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ ರಮೇಶ್ ಜಾರಕಿಹೊಳಿ ವಿರುದ್ದ ಗರಂ ಆದ ಮಾಜಿ ಸಿಎಂ ಸಿದ್ದರಾಮಯ್ಯ, ಅವನ್ಯಾರ್ರಿ ರಮೇಶ್ ಜಾರಕಿಹೊಳಿ. ಆತನಿಗೆ ಐಡಿಯಾಲಜಿ ಇಲ್ಲ. ಏನು ಓದಿಕೊಂಡಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾನೆ. ರಾಜಕೀಯದಲ್ಲಿ ಹುಡುಗಾಟಿಕೆ ಆಡಬಾರದು. ಮಕ್ಕಳಾಟ ಆಡಬಾರದು. ನಮ್ಮ ಜೀವನದ ಹೋರಾಟವೇ ಕೋಮುವಾದಿ ವಿರುದ್ದವಾಗಿ. ಹೀಗಾಗಿ ಅವನ ಮಾತಿಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತು ಕೊಡಬೇಕಿಲ್ಲ ಎಂದು ಹೇಳಿದರು. : - – ’- – – .