ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ: ಕೆಎಸ್ ಸಿಎ ಸದಸ್ಯ ಸುಧೀಂದ್ರ ಸಿಂಧೆ ಬಂಧನ ಬೆಂಗಳೂರು,ಡಿ,4,2019(..): ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಕೆಎಸ್ ಸಿಎ ಸದಸ್ಯ ಸುಧೀಂದ್ರ ಸಿಂಧೆ ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಹಗರಣದಲ್ಲಿ ಸಾಕಷ್ಟು ಜನ ಭಾಗಿಯಾಗಿದ್ದಾರೆ. ಭಾಗಿಯಾಗಿರುವವರು ಅಪ್ರೂವರ್ ಆಗಿ ತನಿಖೆಗೆ ಸಹಕರಿಸಿದರೇ ಬಂಧನದಿಂದ ಬಚಾವ್ ಆಗಬಹುದು ಎಂದು ಕೆಪಿಎಲ್ ಆಟಗಾರರಿಗೆ ಆಫರ್ ನೀಡಿದ್ದಾರೆ. ಇನ್ನು ಪಂದ್ಯದ ಬಳಿಕ ಪಾರ್ಟಿಯಲ್ಲಿ ಸಿನಿಮಾದವರು ಸಹ ಆಟಗಾರರು ಮತ್ತು ಆಡಳಿತ ಮಂಡಳಿಯವರ ಜತೆ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಸಿನಿಮಾದವರಿಗೆ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತೇವೆ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ. : - - - - -