‘ಮಾರುತಿ ಸುಜುಕಿ ಇಂಡಿಯಾ’ : 2020ರ ಜನವರಿಯಿಂದ ಕಾರುಗಳ ಬೆಲೆ ಹೆಚ್ಚಳ ನವದೆಹಲಿ, ಡಿ.03, 2019 : (.. ) ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ‘ಮಾರುತಿ ಸುಜುಕಿ ಇಂಡಿಯಾ’ 2020 ರಿಂದ ತನ್ನ ಕಾರುಗಳ ಬೆಲೆ ಹೆಚ್ಚಳ ಮಾಡಲು ಉದ್ದೇಶಿಸಿದೆ.ಈ ಸಂಬಂಧ ಮಂಗಳವಾರ ಮಾಹಿತಿ ನೀಡಿದ ಮಾರುತಿ ಸುಜಿಕಿ ಇಂಡಿಯಾ ಸಂಸ್ಥೆ ಹೇಳಿದಿಷ್ಟು….ಉತ್ಪಾದನಾ ವೆಚ್ಚ ಸರಿದೂಗಿಸಲು 2020ರ ಜನವರಿಯಿಂದ ಕಾರುಗಳ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯ. ಉತ್ಪಾದನೆಯ ವೆಚ್ಚ ಹೆಚ್ಚಳದಿಂದ ಕಾರು ತಯಾರಿಕೆಗೆ ಆಗುತ್ತಿರುವ ಖರ್ಚು ಕಳೆದ ವರ್ಷದಿಂದ ಕಂಪನಿಯ ಮೇಲೆ ಹೊರೆಯಾಗಿ ಪರಿಣಮಿಸುತ್ತಿದೆ. ಆದ್ದರಿಂದ ಕಾರುಗಳ ಬೆಲೆ ಏರಿಕೆ ಮಾಡುವ ಮೂಲಕ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯ.ಪ್ರಸ್ತುತ ಕಂಪನಿ ಆರಂಭಿಕ ಹಂತದ ಪುಟ್ಟ ಆಲ್ಟೊ ಕಾರಿನಿಂದ ಹಿಡಿದು ಪ್ರೀಮಿಯಂ, ಬಹುಪಯೋಗಿ ಮಾದರಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ರೂ.2.89 ಲಕ್ಷದಿಂದ ರೂ.11.47 ಲಕ್ಷ (ದೆಹಲಿ ಎಕ್ಸ್‌–ಷೋರೂಂ ಬೆಲೆ) ವರೆಗಿನ ಹಲವು ಮಾದರಿಯ ಕಾರುಗಳನ್ನು ಕಂಪನಿ ತಯಾರಿಸುತ್ತಿದೆ. : ------2020 2020 . , . .