ಸ್ಯಾಂಡಲ್’ವುಡ್’ಗೆ ಎಸ್​ .ನಾರಾಯಣ್ ಕಿರಿಯ ಪುತ್ರ ಪವನ್​ ಎಂಟ್ರಿ ಬೆಂಗಳೂರು, ಡಿಸೆಂಬರ್ 02, 2019 (..): ನಿರ್ದೇಶಕ ಎಸ್​ .ನಾರಾಯಣ್ ಕಿರಿಯ ಪುತ್ರ ಪವನ್​ ನಾಯಕನಟನಾಗಿ ಚಿತ್ರರಂಗಕ್ಕೆ ಕಾಲಿಡ್ತಿದ್ದಾರೆ. ಈಗಾಗ್ಲೇ ಸಾಕಷ್ಟು ತರಬೇತಿ ಪಡೆದೇ ಚಿತ್ರರಂಗಕ್ಕೆ ಕಾಲಿಟ್ಟಿರೋ ಪವನ್​ ಅಭಿನಯದ ಈ ಚಿತ್ರಕ್ಕೆ ಮುತ್ತುರತ್ನ ಅಂತ ಟೈಟಲ್​​ ಇಡಲಾಗಿದೆ. ಇಂದು ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ಚಿತ್ರಕ್ಕೆ ಕ್ಲಾಪ್​ ಮಾಡಿದರೆ, ರೋರಿಂಗ್​ ಸ್ಟಾರ್ ಶ್ರೀಮುರುಳಿ ಕ್ಯಾಮರಾ ಚಾಲನೆ ನೀಡೋದ್ರ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.