ಬಿಜೆಪಿ, ಜೆಡಿಎಸ್ ಗೆ ನನ್ನ ಕಂಡ್ರೆ ಭಯ: ಕಾಂಗ್ರೆಸ್ 15 ಕ್ಷೇತ್ರದಲ್ಲೂ ಗೆದ್ದರೇ ಆಶ್ಚರ್ಯವಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ… ಬೆಳಗಾವಿ,ನ,30,2019(..): ಬಿಜೆಪಿ ಜೆಡಿಎಸ್ ಗೆ ನನ್ನನ್ನ ಕಂಡರೇ ಭಯ. ಜೆಡಿಎಸ್ ಬಿಜೆಪಿ ನನ್ನ ಮೇಲೆ ಬಿದ್ರೂ ನಾನು ಹೆದರಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು. ಬೆಳಗಾವಿ ಜಿಲ್ಲೆ ಉಗಾರಖುರ್ದದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಯಾರಿಂದ ಹೊಡೆತ ಬೀಳುತ್ತದೆಯೋ ಅವರೇ ಬಿಜೆಪಿ ಜೆಡಿಎಸ್ ಗೆ ಟಾರ್ಗೆಟ್. ಆದರೆ ನಾನು ಎಲ್ಲವನ್ನು ಎದರಿಸುತ್ತೇನೆ. ಕಾಂಗ್ರೆಸ್ 12 ಕ್ಷೇತ್ರದಲ್ಲಿ ಗೆಲ್ಲುತ್ತದೆ. 15 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ಅಚ್ಚರಿ ಇಲ್ಲ ಎಂದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ದ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಕಟೀಲುಗೆ ರಾಜಕೀಯ ಪ್ರಭುದ್ಧತೆ ಇಲ್ಲ. ಕರ್ನಾಟಕದ ರಾಜಕೀಯದ ಬಗ್ಗೆ ಕಟೀಲ್ ಗೆ ಸಂಪೂರ್ಣವಾಗಿ ಅರ್ಥವಾಗಿಲ್ಲ ಎಂದು ಲೇವಡಿ ಮಾಡಿದರು. : –- - –-15 -