ಪೊಲೀಸರ ಬದಲು ಅಕ್ರಮ ಮದ್ಯ ಮಾರಾಟಕ್ಕೆ ತಾವೇ ಬ್ರೇಕ್ ಹಾಕಿದ ಎಚ್.ಡಿ.ಕೋಟೆ ತಾಲೂಕಿನ ಮೇಟಿಕುಪ್ಪೆ ಗ್ರಾಮಸ್ಥರು ಮೈಸೂರು, ಡಿಸೆಂಬರ್ 01, 2019 (..): ಎಚ್ ಡಿ ಕೋಟೆ ತಾಲೂಕಿನ ಮೇಟಿಕುಪ್ಪೆ ಗ್ರಾಮದಲ್ಲಿ ಅಕ್ರಮ ಮದ್ಯ ಸಾಗಣಿಕೆ ವಾಹನವನ್ನು ಗ್ರಾಮಸ್ಥರು ಹಿಡಿದಿದ್ದಾರೆ. ಇಂದು ಬೆಳಗಿನ ಜಾವ ಮದ್ಯತುಂಬಿದ ಆಟೊ ವಶಕ್ಕೆ ಪಡೆದ ಗ್ರಾಮಸ್ಥರು. ಈ ವೇಳೆ ಆಟೊ ಚಾಲಕ ಸ್ಥಳದಲ್ಲೆ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಅಕ್ರಮ ಮಾರಾಟ ಮಾಡೊ ಅಂಗಡಿಗಳಿಗೆ ಸರಬರಾಜು ಮಾಡಲು ತೆರಳುತ್ತಿದ್ದ ವಾಹನ ಇದಾಗಿತ್ತು. ಪೋಲಿಸರು ಗ್ರಾಮಕ್ಕೆ ಆಗಮಿಸುವಂತೆ ಒತ್ತಾಯ ಮಾಡಿದ್ದು, ಅಕ್ರಮ ಮದ್ಯ ಮಾರಾಟದ ಬಗ್ಗೆ ಹಲವುಬಾರಿ ಪೋಲಿಸರಿಗೆ ದೂರ ನೀಡಿದ್ದರೂ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ. ಪೋಲಿಸರು ಕ್ರಮ ಕೈಗೊಳ್ಳದ ಹಿನ್ನೆಲೆ ತಾವೆ ಅಕ್ರಮ ಮದ್ಯ ಮಾರಟಕ್ಕೆ ಕಡಿವಾಣ ಹಾಕಲು ಗ್ರಾಮಸ್ಥರು ಮುಂದಾಗಿದ್ದಾರೆ. ಪೋಲಿಸರ ಕುಮ್ಮಕ್ಕಿನಿಂದಲೆ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.