ಮೈಸೂರಿನಲ್ಲಿ ಶ್ರೀಗಂಧದ ಮರ ಕಳ್ಳತನಕ್ಕೆ ಖದೀಮರ ಸಿದ್ಧತೆ: ಕಳ್ಳರ ಪಾಲಾಗುವ ಮುನ್ನ ಪೊಲೀಸರು, ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಲಿ… ಮೈಸೂರು,ನ,29,2019(..): ಮೈಸೂರಿನ ಕುವೆಂಪು ನಗರದ ವಿವೇಕಾನಂದ ವೃತ್ತದ ಬಳಿ ಶ್ರೀ ಪಾದ ಶಿಲೆ ಉದ್ಯಾನದ ಬಳಿ ಇರುವ ಬೃಹತ್ ಶ್ರೀಗಂಧದ ಮರವೊಂದು ಇಂದು ಕಳ್ಳರ ಪಾಲಾಗಲಿದೆ. ಶ್ರೀಗಂಧದ ಮರವನ್ನು ಕತ್ತರಿಸಿ ಹೊತ್ತೊಯ್ಯಲು ಅನುಕೂಲವಾಗುವಂತೆ ಕಳ್ಳರು ಗರಗಸದಿಂದ ಕುಯ್ದು ಸಿದ್ಧಪಡಿಸಿದ್ದಾರೆ. ಹೀಗಾಗಿ ಈ ಶ್ರೀಗಂಧದ ಮರ ಚೋರರ ಪಾಲಾಗುವ ಮುನ್ನ ಕುವೆಂಪು ನಗರ ಪೊಲೀಸರು ಹಾಗೂ ಅರಣ್ಯ ಇಲಾಖೆಯು ಎಚ್ಚೆತ್ತು ಈ ಶ್ರೀಗಂಧದ ಮರವನ್ನು ಕಾಪಾಡಬೇಕಾಗಿದೆ. ಅಥವಾ ಅರಣ್ಯ ಇಲಾಖೆಯವರೇ ಈ ಶ್ರೀಗಂಧದ ಮರವನ್ನು ಕತ್ತರಿಸಿ ತೆಗೆದುಕೊಂಡು ಹೋಗಿ ಕಳ್ಳತನಕ್ಕೆ ಬ್ರೇಕ್ ಹಾಕಲಿ ಎಂಬ ಆಗ್ರಹ ಕೇಳಿ ಬಂದಿದೆ. ಕೃಪೆ -ಪಿ.ಜೆ.ರಾಘವೇಂದ್ರ. ನ್ಯಾಯವಾದಿ, ಮೈಸೂರು. : - - –