ಇಸ್ರೋದಿಂದ ಮತ್ತೊಂದು ಸಾಧನೆ: ಪಿಎಸ್ ಎಲ್ ವಿ-ಸಿ47 ರಾಕೆಟ್ ಮೂಲಕ 14 ಉಪಗ್ರಹಗಳ ಉಡಾವಣೆ…. ಆಂಧ್ರ ಪ್ರದೇಶ,ನ,27,2019(..): ಭಾರತೀಯ ಬಾಹ್ಯಕಾಶ ಸಂಸ್ಥೆ ಇದೀಗ ಮತ್ತೊಂದು ಸಾಧನೆ ಮಾಡಿದ್ದು ಪಿಎಸ್ ಎಲ್ ವಿ-ಸಿ47 ರಾಕೆಟ್ ಮೂಲಕ 14 ಉಪಗ್ರಹಗಳನ್ನ ಉಡಾವಣೆ ಮಾಡಿದೆ. ಅಧುನಿಕ ತಂತ್ರಜ್ಞಾನದ ಭೂ ವೀಕ್ಷಣೆಗೆ ಸಹಾಯಕಾರಿಯಾಗುವ ಕಾಟೋಸ್ಯಾಟ್ – 3 ಉಪಗ್ರಹ ಇಂದು ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇದರ ಜತೆ ಅಮೆರಿಕಾದ ವಾಣಿಜ್ಯೋಧ್ದೇಶದ 13 ನ್ಯಾನೋ ಉಪಗ್ರಹಗಳು ನಭಕ್ಕೆ ಜಿಗಿದಿವೆ. ಪಿಎಸ್.ಎಲ್.ವಿ-ಸಿ 47 ರಾಕೆಟ್ ನಲ್ಲಿ ಈ 14 ಉಪಗ್ರಹಗಳನ್ನ ಯಶಸ್ವಿ ಉಡಾವಣೆ ಮಾಡಲಾಗಿದೆ. ಈ ಎಲ್ಲ ಉಪಗ್ರಹಗಳು ಸೂರ್ಯನ ಸ್ಥಿರ ಕಕ್ಷೆಗೆ ಸೇರಲಿವೆ. ಇನ್ನು ಕಾಟೋಸ್ಯಾಟ್ – 3 ಉಪಗ್ರಹ ಹೈರೆಸಲ್ಯೂಶನ್ ಇಮೇಂಜಿಂಗ್ ಸಾಮರ್ಥ್ಯ ಹೊಂದಿದ್ದು, ಇದು ಮೂರನೇ ತಲೆಮಾರಿನ ಅತ್ಯಾಧುನಿಕ ಸುಧಾರಿತ ಉಪಗ್ರಹವಾಗಿದೆ. : - – 14 – -C47 -