ಕಾಂಗ್ರೆಸ್ ನಿರ್ನಾಮಕ್ಕೆ ದಿನೇಶ್ ಗುಂಡೂರಾವ್ ಕಾರಣ- ನಿರ್ಗತಿಕರಾಗ್ತಾರೆ ಎಂಬ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ತಿರುಗೇಟು…. ಬೆಂಗಳೂರು,ನ.26,ನ,26,2019(..): ನಾವು ಕಾಂಗ್ರೆಸ್ ಬಿಡಲು ಮತ್ತು ಕಾಂಗ್ರೆಸ್ ನಿರ್ನಾಮವಾಗಲು ದಿನೇಶ್ ಗುಂಡೂರಾವ್ ಕಾರಣ ಎಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ವಾಗ್ದಾಳಿ ನಡೆಸಿದರು. ಉಪಚುನಾವಣೆ ಬಳಿಕ ಎಸ್.ಟಿ ಸೋಮಶೇಖರ್ ನಿರ್ಗತಿಕರಾಗುತ್ತಾರೆ ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್, ಉಪಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ನಾನು ನಿರ್ಗತಿಕನಾಗುತ್ತೇನೋ ಇಲ್ಲವೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಿರ್ಗತಿಕರಾಗುತ್ತಾರೋ ಕಾದು ನೋಡಿ ಎಂದು ಟಾಂಗ್ ನೀಡಿದರು. ದಿನೇಶ್ ಗುಂಡೂರಾವ್ ಅವರ ತಂದೆ ಗುಂಡೂರಾವ್ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ನಾನು ಒಬ್ಬ ಸಾಮಾನ್ಯ ಇನ್‍ಸ್ಪೆಕ್ಟರ್ ಮಗ. ಅವರಷ್ಟು ಜನಪ್ರಿಯತೆ ಇಲ್ಲದಿರಬಹುದು. ನಾನು ಅವರಷ್ಟು ಎತ್ತರಕ್ಕೆ ಬೆಳೆದಿಲ್ಲ. ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಎಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂಬುದು ಗೊತ್ತು ಎಂದು ಎಸ್.ಟಿ ಸೋಮಶೇಖರ್ ಲೇವಡಿ ಮಾಡಿದರು. ನನಗೆ ಯಾವುದೇ ಟೆನ್ಷನ್ ಇಲ್ಲ. ಆದ್ರೆ ಚಿಹ್ನೆ ಬದಲಾವಣೆ ಬಗ್ಗೆ ಸ್ವಲ್ಪ ಗೊಂದಲ ಇದೆ. ಎಲ್ಲರನ್ನ ಮನವೊಲಿಸುತ್ತೇನೆ. ಅಭಿವೃದ್ದಿಗಾಗಿ ಜನ ನನ್ನನ್ನ ಬೆಂಬಲಿಸುತ್ತಾರೆ ಎಂದು ಎಸ್.ಟಿ ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು. : – - -