ತಲೈವಾ ರಜನಿಕಾಂತ್​ ‘ಬಾಷಾ’ ರಿ-ರಿಲೀಸ್​ ! ಬೆಂಗಳೂರು, ನವೆಂಬರ್ 25, 2019 (..): ತಲೈವಾ ರಜನಿಕಾಂತ್​ ಅವರ ಸಿನಿ ಜರ್ನಿಯನ್ನೇ ಬದಲಾಯಿಸಿದ ‘ಬಾಷಾ’ ಚಿತ್ರ ಮತ್ತೊಮ್ಮೆ ರಿ-ರಿಲೀಸ್​ ಆಗುತ್ತಿದೆ. ರಜನಿಕಾಂತ್​ ಅವರ ಹುಟ್ಟು ಹಬ್ಬದ ಪ್ರಯುಕ್ತ ಡಿಸೆಂಬರ್​ 11 ರಂದು ‘ಬಾಷಾ’ ಚಿತ್ರ ಮತ್ತೊಮ್ಮೆ ರಿ-ರಿಲೀಸ್​ ಆಗಲಿದೆ. ಡಿಸೆಂಬರ್​ 12 ರಂದು ಅಭಿಮಾನಿಗಳೊಂದಿಗೆ ಕೇಕ್​ ಕಟ್​ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ‘ಬಾಷಾ’ ಸುರೇಶ್​ ಕೃಷ್ಣ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ. ಈ ಸಿನಿಮಾದಲ್ಲಿ ರಜನಿಕಾಂತ್​ ಅವರಿಗೆ ನಾಯಕಿಯಾಗಿ ಖ್ಯಾತ ನಟಿ ನಗ್ಮಾ ಕಾಣಿಸಿಕೊಂಡಿದ್ದರು.