ವಿರಾಟ್ ಕೊಹ್ಲಿಗೆ ಪೇಟಾ ವರ್ಷದ ಭಾರತೀಯ ಪ್ರಶಸ್ತಿ ಬೆಂಗಳೂರು, ನವೆಂಬರ್ 21, 2019 (..): ಪೇಟಾ ( ) ಸಂಸ್ಥೆಯ ವರ್ಷದ ಭಾರತೀಯ ಪ್ರಶಸ್ತಿಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಯ್ಲಿ ಭಾಜನರಾಗಿದ್ದಾರೆ. ಪ್ರಾಣಿಗಳ ಬಗ್ಗೆ ಸಾಮಾಜಿಕ ಅರಿವು ಮೂಡಿಸುವಲ್ಲಿ ಕೊಹ್ಲಿ ಸಕ್ರಿಯರಾಗಿದ್ದಾರೆ. ಪ್ರಾಣಿಗಳ ಬಗ್ಗೆ ಕೊಹ್ಲಿ ಹೊಂದಿರುವ ಕಾಳಜಿ ಅನುಕರಣೀಯ. ಹೀಗಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಖ್ಯಾತ ಕ್ರಿಕೆಟರ್ ಆಗಿ ಕೊಹ್ಲಿಯ ಈ ನಡೆಯನ್ನು ಎಲ್ಲರೂ ಅನುಸರಿಸಬೇಕು ಎಂದು ಪೇಟಾ ಸಂಸ್ಥೆಯ ಭಾರತದ ನಿರ್ದೇಶಕ ಸಚಿನ್ ಬಂಗೇರ ಹೇಳಿದ್ದಾರೆ.