ನಾವು ಕಾಂಗ್ರೆಸ್ ತೊರೆಯಲು ಹೆಚ್.ಡಿ ಕುಮಾರಸ್ವಾಮಿಯೇ ಕಾರಣ- ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಹೇಳಿಕೆ… ಬೆಂಗಳೂರು,ನ,19,2019(..): ನಾನು ಕಾಂಗ್ರೆಸ್ ಬಿಡಲು ಹೆಚ್.ಡಿ ಕುಮಾರಸ್ವಾಮಿಯೇ ಕಾರಣ ಎಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಹೇಳಿದರು. ಇಂದು ಮಾಧ್ಯಮದ ಜತೆ ಮಾತನಾಡಿದ ಸೋಮಶೇಖರ್, ಬಡವರ ಪರ ಎನ್ನುವ ಹೆಚ್.ಡಿ ಕುಮಾರಸ್ವಾಮಿ ಹೈಫೈ ಜೀವನ ನಡೆಸುತ್ತಿದ್ದರು. ಕುಮಾರಸ್ವಾಮಿ ಪಂಚತಾರ ಹೋಟೆಲ್ ನಲ್ಲಿ ತಂಗುತ್ತಿದ್ದರು. ಅವರ ಭೇಟಿಗೆ ಅವಕಾಶ ಕೊಡುತ್ತಿರಲಿಲ್ಲ. ಗಂಟೆಗಟ್ಟಲೇ ಕಾಯಬೇಕಿತ್ತು. ಹೆಚ್.ಡಿಕೆ ಹೈಫೈ ಜೀವನದಿಂದ ಬಹಳ ತೊಂದರೆಯಾಗಿತ್ತು ಎಂದು ಆರೋಪಿಸಿದರು. ಕ್ಷೇತ್ರದ ಅನುದಾನ ನೀಡುವ ವಿಚಾರಕ್ಕೆ ಬೇಸರವಿತ್ತು. ಹೀಗಾಗಿ ರಾಜೀನಾಮೆ ಕೊಟ್ಟು ಹೊರಬಂದೆವು ಎಂದು ಎಸ್ ಟಿ ಸೋಮಶೇಖರ್ ತಿಳಿಸಿದರು. : - - –- .