ಬಿಜೆಪಿ ಜೆಡಿಎಸ್. ಅನರ್ಹರಿಗೆ ನಾನೇ ಟಾರ್ಗೆಟ್: ಕಾಂಗ್ರೆಸ್ ನಲ್ಲಿ ನಾನು ಏಕಾಂಗಿ ಅಲ್ಲ ಎಂದ ಸಿದ್ಧರಾಮಯ್ಯ…. ಮೈಸೂರು,ನ,20,2019(..): ಬಿಜೆಪಿ, ಜೆಡಿಎಸ್ ಅನರ್ಹ ಶಾಸಕರು ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ. ಹತಾಶರಾಗಿ ನನ್ನನ್ನ ಟಾರ್ಗೆಟ್ ಮಾಡಿದ್ದು ಅವರಿಗೆ ನನ್ನನ್ನ ಕಂಡರೇ ಭಯ ಎನಿಸುತ್ತೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಲೇವಡಿ ಮಾಡಿದರು. ಮೈಸೂರಿನಲ್ಲಿ ಇಂದು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಕಾಂಗ್ರೆಸ್ ನಲ್ಲಿ ಏಕಾಂಗಿಯಲ್ಲ. ಬಿಎಸ್ ಯಡಿಯೂರಪ್ಪಗೆ ನಾನು ಏಕಾಂಗಿಯಾಗಿದ್ದೇನೆ ಅನ್ನಿಸಿರಬಹುದು. ಆದರೆ ಕಾಂಗ್ರೆಸ್ ಯಾರನ್ನೂ ಏಕಾಂಗಿ ಮಾಡುವುದಿಲ್ಲ ಎಂದು ಟಾಂಗ್ ನೀಡಿದರು. ಇದೇ ವೇಳೆ ಸಚಿವ ಶ್ರೀರಾಮುಲು ಸವಾಲು ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಶ್ರೀರಾಮುಲು ವೆರಿ ವೆರಿ ಪಾಪ್ಯುಲರ್ ಲೀಡರ್. ಅಷ್ಟೊಂದು ಪಾಪ್ಯುಲರ್ ಲೀಡರ್ ವಿರುದ್ದ ಸ್ಪರ್ಧಿಸಲು ಆಗಲ್ಲ. ಅವರು ಯಾರ ವಿರುದ್ದ ಬೇಕಾದರೂ ತಡೆ ತಟ್ಟುತ್ತಾರೆ. ನಾವು ಅವರ ರೀತಿ ತೊಡೆ ತಟ್ಟಲು ಆಗಲ್ಲ ಎಂದು ಕಾಲೆಳೆದರು. : – - –- – -