ಸಿಎಂ ಬಿಎಸ್ ವೈ 18 ವರ್ಷದ ಯುವಕ: ಪಾದರಸದಂತೆ- ಗುಣಗಾನ ಮಾಡಿದ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್…. ಬೆಂಗಳೂರು,ನ,20,2019(..): ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಪ್ರಚಾರ ಕಾರ್ಯ ಜೋರಾಗಿದೆ. ಈ ನಡುವೆ ಯಶವಂತ ಪುರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್.ಟಿ ಸೋಮಶೇಖರ್, ಇದೀಗ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಹೊಗಳಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ 18 ವರ್ಷದ ಯುವಕ. ಪಾದರಸದಂತೆ ಕೆಲಸ ಮಾಡುತ್ತಾರೆ ಎಂದು ಅನರ್ಹ ಶಾಸಕ ಎಸ್ .ಟಿ ಸೋಮಶೇಖರ್ ಗುಣಗಾನ ಮಾಡಿದ್ದಾರೆ. ಇಂದು ಯಶವಂತಪುರ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾತನಾಡಿದ ಎಸ್.ಟಿ ಸೋಮಶೇಖರ್, ಬಿಜೆಪಿಯಲ್ಲಿ ಎಲ್ಲದಕ್ಕೂ ಚೌಕಟ್ಟಿದೆ. ಅದರ ವ್ಯಾಪ್ತಿಗೆ ನಾವು ಬರಬೇಕು. ಈ ವ್ಯಾಪ್ತಿಗೆ ಬರಲು ನಾವು ನಿರಂತರ ಪ್ರಯತ್ನ ಮಾಡುತ್ತೇವೆ. ಸಿಎಂ ಬಿಎಸ್ ಯಡಿಯೂರಪ್ಪ ಪಾದರಸದಂತೆ ಕೆಲಸ ಮಾಡುತ್ತಾರೆ. ಶಾಸಕರು ಹೋದ ತಕ್ಷಣ ಸಿಗುತ್ತಾರೆ ಎಂದು ಹೇಳಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡು ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಯಶವಂತಪುರ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಟಿ ಸೋಮಶೇಖರ್ ಸ್ಪರ್ಧಿಸಿದ್ದಾರೆ. : - 18 - - -