ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಪ್ಯಾಸೆಂಜರ್ ರೈಲು ಟಿಕೆಟ್ ದರ ಅಗ್ಗ. ಮೈಸೂರು,ಫೆಬ್ರವರಿ,28,2024(..):ರೈಲ್ವೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದ್ದು ಇನ್ಮುಂದೆ ಪ್ಯಾಸೆಂಜರ್ ರೈಲು ಟಿಕೆಟ್ ದರ ಅಗ್ಗವಾಗಲಿದೆ. ಹೌದು, ಕೋವಿಡ್ ವೇಳೆ ರದ್ದುಪಡಿಸಿದ್ದ ಆರ್ಡಿನರಿ ಕ್ಲಾಸ್ ದರವನ್ನು ಮರು ಜಾರಿಗೊಳಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಪ್ಯಾಸೆಂಜರ್, ಮೆಮು\ಡೆಮು ರೈಲುಗಳ ಪ್ರಯಾಣದರ ಶೇಕಡಾ 50% ರಷ್ಟು ಕಡಿಮೆಯಾಗಲಿದೆ. ಎಕ್ಸ್‌ ಪ್ರೆಸ್‌ ಸ್ಪೆಷಲ್ ಅಥವಾ ಮೆಮು\ಡೆಮು ಎಕ್ಸ್‌ ಪ್ರೆಸ್‌ ಗಳಾಗಿ ಪರಿವರ್ತಿಸಲಾಗಿದ್ದ ರೈಲುಗಳನ್ನು ಮೊದಲಿನಂತೆ ಸಾಮಾನ್ಯ ಪ್ಯಾಸೆಂಜರ್ ರೈಲುಗಳಾಗಿ ಓಡಿಸಲು ರೈಲ್ವೆ ಇಲಾಖೆ‌ ಮುಂದಾಗಿದೆ. ಕೋವಿಡ್ ವೇಳೆ ಕನಿಷ್ಠ ಟಿಕೆಟ್ ದರವನ್ನು 10 ರೂಪಾಯಿಯಿಂದ 30 ರೂಪಾಯಿಗೆ ಏರಿಸಲಾಗಿತ್ತು. : –- -- -