ಚುನಾವಣೆಗೆ ನಿಲ್ಲಿ ಎಂದು ಸವಾಲು ಹಾಕಿದ್ದ ಶ್ರೀರಾಮುಲುಗೆ ತಿರುಗೇಟು: ಜೆಡಿಎಸ್, ಬಿಜೆಪಿ ವಿರುದ್ದ ಹಣ, ಸೀರೆ ಹಂಚಿಕೆ ಆರೋಪ ಮಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ.. ಮೈಸೂರು,ನ,19,2019(..): ಉಪಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಜೆಡಿಎಸ್ ನವರು ಹಣ ಸೀರೆ ಹಂಚಿಕೆ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಬಿಎಸ್ ಯಡಿಯೂರಪ್ಪಗೆ ನೈತಿಕತೆ ಇಲ್ಲ. ಬಿಜೆಪಿಯವರು ಚುನಾವಣೆಯಲ್ಲಿ ಗೆಲ್ಲಲು ಹಣ ಸೀರೆ ಹಂಚಿಕೆ ಮಾಡುತ್ತಿದ್ದಾರೆ. ಆದರೆ ಜನ ಬಿಜೆಪಿ, ಜೆಡಿಎಸ್ ಕಡೆ ಇಲ್ಲ ಎಂದು ಹೇಳಿದರು. ಹಾಗೆಯೇ ಸಿದ್ಧರಾಮಯ್ಯ ರಾಜೀನಾಮೆ ನೀಡಿ ಚುನಾವಣೆಗೆ ನಿಲ್ಲಲಿ. ನಾನೂ ನಿಲ್ಲುತ್ತೇನೆ ಎಂದು ನೋಡೋಣ ಎಂದು ಸವಾಲು ಹಾಕಿದ್ದ ಸಚಿವ ಶ್ರೀರಾಮುಲುಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಶ್ರೀರಾಮುಲು ನನ್ನ ವಿರುದ್ದ ಸೋತು ಹತಾಶರಾಗಿದ್ದಾರೆ. ಸ್ವಾರ್ಥಕ್ಕಾಗಿ ಮಾತನಾಡುವವರಿಗೆ ನಾನು ಉತ್ತರ ನೀಡಲ್ಲ. ಸಚಿವ ಶ್ರೀರಾಮುಲುಗೆ ಮಾನಮರ್ಯಾದೆ ಇದ್ದಿದ್ದರೇ ಅಂದೇ ರಾಜೀನಾಮೆ ನೀಡಬೇಕಿತ್ತು ಎಂದು ಟಾಂಗ್ ನೀಡಿದರು. : - –- – - – - – .