ಯೂ ಟ್ಯೂಬ್ ನಲ್ಲಿ ಮೆಚ್ಚುಗೆ ಗಳಿಸಿದ ‘ಮುಂದಿನ ನಿಲ್ದಾಣ’ ಟೀಸರ್ ಬೆಂಗಳೂರು, ನವೆಂಬರ್ 19, 2019 (..): ‘ಮುಂದಿನ ನಿಲ್ದಾಣ’ ಸಿನಿಮಾದ ‘ಮನಸೆ ಮಾಯ’ ಹಾಡು ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ‘ಮುಂದಿನ ನಿಲ್ದಾಣ’ ಸಿನಿಮಾದ ಹಾಡುಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗ್ತಿರೋ ಬೆನ್ನಲೇ ಚಿತ್ರತಂಡ ಟ್ರೈಲರ್ ಕೂಡ ರಿಲೀಸ್ ಮಾಡಿದೆ. ಹಾಡುಗಳಂತೆ ಟ್ರೈಲರ್ ಕೂಡ ಸಿನಿರಸಿಕರ ಮೆಚ್ಚುಗೆಗೆ ಕಾರಣವಾಗ್ತಿದೆ. ಯೂಟ್ಯೂಬ್​ನಲ್ಲಿ ಇದುವರೆಗೂ ಸುಮಾರು 1 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿರೋ ಟ್ರೈಲರ್​ಗೆ ಅಭಿಮಾನಿಗಳು ಬಹುಪರಾಕ್ ಅಂತಿದ್ದಾರೆ. ಚಿತ್ರದಲ್ಲಿ ಪ್ರವೀಣ್ ರಾಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯ ಕಶ್ಯಪ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್​​ ಮೊದಲ ವಾರದಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.