ಹೆಸರು ಬದಲಿಸಿಕೊಂಡ ಕ್ರೇಜಿಸ್ಟಾರ್ ಪುತ್ರ ! ಬೆಂಗಳೂರು, ನವೆಂಬರ್ 18, 2019 (..): ನಟ ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಮನೋರಂಜನ್ ಬದಲು ಮನು ರಂಜನ್ ಎಂದು ಇನ್ನು ಮುಂದೆ ಅವರನ್ನು ಕರೆಯಬೇಕಾಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಹೆಸರು ಬದಲಾವಣೆ ಅಗತ್ಯ ಇದ್ದು, ತಮ್ಮ ಹೆಸರನ್ನು ಕೊಂಚ ಬದಲಾವಣೆ ತಂದಿದ್ದಾರೆ. ಮನೋ ಬದಲು ಮನು ಆಗಿದ್ದಾರೆ. ಇನ್ನು ಮುಂದೆ ಸಿನಿಮಾಗಳ ಟೈಟಲ್ ಕಾರ್ಡ್ ನಲ್ಲಿಯೂ ಇದೇ ಹೆಸರು ಮುಂದುವರೆಯುತ್ತದೆ.