ಶಾಸಕ ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಬಗ್ಗೆ ಗಂಭೀರವಾಗಿದೆ- ವೈದ್ಯ ಡಾ. ಶಣೈ ಮಾಹಿತಿ.. ಮೈಸೂರು,ನ,18,2019(..): ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇನ್ನು24 ರಿಂದ 48 ಗಂಟೆಗಳ ಅವಧಿ ಬೇಕಿದೆ. ಅಲ್ಲಿಯವರೆಗೆ ಏನು ಹೇಳಲು ಸಾಧ್ಯವಿಲ್ಲ ಎಂದು ಆಸ್ಪತ್ರೆ ವೈದ್ಯ ಡಾ. ಶಣೈ ತಿಳಿಸಿದ್ದಾರೆ. ಶಾಸಕ ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿರುವ ವೈದ್ಯ ಡಾ. ಶಣೈ, ತನ್ವೀರ್ ಸೇಠ್ ಚಿಕಿತ್ಸೆಗೆ ಸ್ಪದಿಸುತ್ತಿದ್ದಾರೆ. ಕುತ್ತುಗೆ ರಕ್ತ ನಾಳ ಮತ್ತು ನರಗಳು ಕಟ್ ಆಗಿದ್ದವು. ಅವುಗಳನ್ನ ಆಪರೇಷನ್ ಮಾಡಲಾಗಿದೆ. ಆಪರೇಷನ್ ಮಾಡಿ ನಾಲ್ಕೈದು ಗಂಟೆ ಕಳೆದಿದೆ. ರಕ್ತ ಶ್ರಾವ ತಡೆಗಟ್ಟುವದಷ್ಟೆ ಮಾಡಿದೆ. ಎಲ್ಲ ಪರೀಕ್ಷೆಗಳು ನಡೆಯುತ್ತಿವೆ ಎಂದರು. ಕುತ್ತಿಗೆ ಎಲ್ಲಾ ನರಗಳು ಮೆದುಳಿಗೆ ಕನೆಕ್ಟ್ ಆಗೋದು ಹಾಗಾಗಿ ತೊಂದರೆ ಹೆಚ್ಚು. ಯಾರು ಅವರನ್ನು ನೋಡಲು ಬರುವುದು ಬೇಡ ಎಂದು ವೈದ್ಯ ಡಾ. ಶಣೈ ಮನವಿ ಮಾಡಿದ್ದಾರೆ. : -- - – - –- .