ಬೆಂಗಳೂರು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಅಂಬಿ ಪುಣ್ಯ ತಿಥಿ ಬೆಂಗಳೂರು, ನವೆಂಬರ್ 15, 2019 (..): ರೆಬಲ್ ಸ್ಟಾರ್ ಅಂಬರೀಶ್ ಪುಣ್ಯತಿಥಿ ಕಾರ್ಯಕ್ರಮಗಳು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದಿವೆ ಎಂದು ಮೂಲಗಳು ತಿಳಿಸಿವೆ. ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿ ನವಂಬರ್ 14ಕ್ಕೆ ಒಂದು ವರ್ಷವಾಗುತ್ತಿದೆ. ಅಭಿಮಾನಿಗಳ ಪ್ರೀತಿಯ ಅಂಬಿಯ ಮೊದಲ ವರ್ಷದ ಪುಣ್ಯ ತಿಥಿ . ಇದಕ್ಕಾಗಿ ಕುಟುಂಬ ವರ್ಗ ಅರಮನೆ ಮೈದಾನದಲ್ಲಿ ಕುಟುಂಬ ವರ್ಗ ಪುಣ್ಯ ತಿಥಿಯ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದೆ. ಈ ಸಂದರ್ಭದಲ್ಲಿ ಕುಟುಂಬ ವರ್ಗದವರ ಜತೆ ಅಭಿಮಾನಿಗಳೂ ಸೇರಿಕೊಂಡಿದ್ದರು.