ಕಿಚ್ಚನ ಟ್ವಿಟ್ಟರ್ ಖಾತೆಗೆ ಕನ್ನ ಹಾಕಿದ ಹ್ಯಾಕರ್’ಗಳು! ಬೆಂಗಳೂರು, ನವೆಂಬರ್ 15, 2019 (..): ನಟ ಕಿಚ್ಚಾ ಸುದೀಪ್ ಅವರ ಟ್ಟಿಟರ್ ಅಕೌಂಟ್ ಹ್ಯಾಕ್ ಮಾಡಲು ಯತ್ನಿಸಲಾಗಿದೆ ಎಂದು ಸುದೀಪ್ ಸಾಂಸ್ಕೃತಿಕ ಪರಿಷತ್ತು ಎಂಬ ಟ್ವಿಟರ್ ಖಾತೆಯಲ್ಲಿ ತಿಳಿಸಲಾಗಿದೆ. ಸುಮಾರು 7 ಬಾರಿ ಸುದೀಪ್ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಲು ಯತ್ನಿಸಲಾಗಿದೆ. ಪಾಸ್ ವರ್ಡ್ ರೀಸೆಟ್ ಮನವಿ ಸುದೀಪ್ ಅವರ ಮೇಲ್ ಗೆ ಬಂದಿದೆ. ಸೈಬರ್ ಕ್ರೈಂ ಸಿಐಡಿ ಈ ಬಗ್ಗೆ ಗಮನಹರಿಸಲು ಕೋರುತ್ತೆವೆ ಎಂದು ಟ್ವಿಟ್ ಮೂಲಕ ಮನವಿ ಮಾಡಿದ್ದಾರೆ. ಸದ್ಯ ಸುದೀಪ್ ಶೂಟಿಂಗ್ ಗಾಗಿ ಪೋಲ್ಯಾಂಡ್ ನಲ್ಲಿ ಬೀಡಿಬಿಟ್ಟಿದ್ದು, ಇದರ ನಡುವೆಯೆ ಅವರ ಟ್ವಿಟರ್ ಅಕೌಂಟ್ ಹ್ಯಾಕ್ ಯತ್ನ ನಡೆದಿರುವುದು ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದೆ.