ಮಕ್ಕಳ ದಿನಾಚರಣೆಗೆ ಗೂಗಲ್’ನಿಂದ ವಿಶೇಷ ಡೂಡಲ್ ! ಬೆಂಗಳೂರು, ನವೆಂಬರ್ 14, 2019 (..): ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಗೂಗಲ್ ವಿಶೇಷ ಡೂಡಲ್ ರಚಿಸುವ ಮೂಲಕ ಮಕ್ಕಳಿಗೆ ಶುಭಹಾರೈಸಿದೆ. ಮಕ್ಕಳು ಸಾಮಾನ್ಯವಾಗಿ ರಚಿಸುವ ಕ್ರಯಾನ್ಸ್ ನಿಂದ ಮಾಡಿರುವಂತಹ ಪರಿಸರ ಚಿತ್ರವನ್ನು ಬಳಸಿಕೊಂಡು ಗೂಗಲ್ ಈ ಬಾರಿ ವಿಶೇಷ ಡೂಡಲ್ ರಚಿಸಿದೆ. ಮಕ್ಕಳಿಗೆ ಗೂಗಲ್ ಡೂಡಲ್ ರಚಿಸುವ ಸ್ಪರ್ಧೆಯನ್ನು ಕೂಡ ಹಮ್ಮಿಕೊಳ್ಳುತ್ತದೆ. ಆಯ್ದ ಚಿತ್ರಗಳಿಗೆ ವಿಶೇಷ ಬಹುಮಾನವನ್ನು ಕೂಡ ಗೂಗಲ್ ನೀಡಲಿದೆ ಎಂದು ತಿಳಿದು ಬಂದಿದೆ.