ದೀಪಿಕಾ-ರಣ್’ವೀರ್ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮ ! ಬೆಂಗಳೂರು, ನವೆಂಬರ್ 14, 2019 (..): ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ ತಾರಾ ದಂಪತಿ ದೀಪಿಕಾ ಪಡುಕೊಣೆ ಹಾಗೂ ರಣವೀರ್ ಸಿಂಗ್. ಹೌದು. ದೀಪಿಕಾ ಹಾಗೂ ರಣವೀರ್​ ಸಿಂಗ್​ ವಿವಾಹವಾಗಿ ಇಂದಿಗೆ ಒಂದು ವರ್ಷ. ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ವಿವಾಹಕ್ಕೆ ಒಂದು ಒಂದರ ಹರೆಯ. ಹೌದು, 2018ರ ನವೆಂಬರ್​ 14ರಂದು ದೀಪಿಕಾ ಹಾಗೂ ರಣವೀರ್​ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಆಗ ಇವರ ವಿವಾಹದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದೀಪ್​ವೀರ್​ ವೆಡ್ಡಿಂಗ್​ ಎಂದೇ ಟ್ರೆಂಡ್​ ಆಗಿತ್ತು. ಈ ಇಬ್ಬರು ಇಂದು ಮೊದಲು ತಿರುಪತಿಗೆ ತೆರಳಿದ್ದು, ನಂತರ ನವೆಂಬರ್​ 15ರಂದು ಅಮೃತಸರದಲ್ಲಿರುವ ಗೋಲ್ಡನ್​ ಟೆಂಪಲ್​ಗೆ ಭೇಟಿ ನೀಡಲಾಗಿದ್ದಾರಂತೆ. ಅವರ ವಿವಾಹವೂ ನ.14ರಂದು ಕೊಂಕಣಿ ಶೈಲಿಯಲ್ಲಿ ಹಾಗೂ ನ.15ರಂದು ಪಂಜಾಬಿ ಸಂಪ್ರದಾಯದಂತೆ ನಡೆದಿತ್ತು.