ಅನರ್ಹ ಶಾಸಕರ ತೀರ್ಪುನ ಬಗ್ಗೆ ಯಾವುದೇ ಆತಂಕ ಇಲ್ಲ-ಸಚಿವ ಮಾಧುಸ್ವಾಮಿ… ಬೆಳಗಾವಿ,ನ,13,2019(..): ಹಿಂದಿನ ಸ್ಪೀಕರ್ ಶಾಸಕ ಸ್ಥಾನದಿಂದ ತಮ್ಮನ್ನ ಅನರ್ಹಗೊಳಿಸಿದ್ದ ಆದೇಶ ಪ್ರಶ್ನಿಸಿ 17 ಮಂದಿ ಶಾಸಕರು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ತೀರ್ಪು ಇಂದು ಪ್ರಕಟವಾಗಲಿದೆ. ಈ ಬಗ್ಗೆ ಇಂದು ಬೆಳಗಾವಿಯಲ್ಲಿ ಮಾತನಾಡಿರುವ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕ ತೀರ್ಪಿನ ಬಗ್ಗೆ ಯಾವುದೇ ಆತಂಕವಿಲ್ಲ. ಈ ಕೇಸ್ ನಲ್ಲಿ ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಲು ಬರಲ್ಲ. ಎರಡು ವರ್ಷ ಶಿಕ್ಷೆ ಅನುಭವಿಸಿ ಅನರ್ಹರಾದ್ರೆ ಮಾತ್ರ ಇದು ಅನ್ವಯಿಸುತ್ತೆ. ಅಂತಹ ಸಂದಿಗ್ದ ಪರಿಸ್ಥಿತಿ ಅನರ್ಹ ಶಾಸಕರಿಗೆ ಬಂದಿಲ್ಲ ಎಂದರು. ಚುನಾವಣೆ ದಿನಾಂಕ ನಿಗದಿ ಮಾಡುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ತಿಳಿಸಿತ್ತು. ಹೀಗಾಗಿ ಚುನಾವಣೆ ನಡೆಯೋದು ಖಚಿತ ಎಂದು ಮಾಧುಸ್ವಾಮಿತ ತಿಳಿಸಿದರು. : - - –