ಅಧಿಕಾರಕ್ಕಾಗಿ ಯಾರು ಸ್ವಾರ್ಥಿಗಳಾಗಿದ್ದಾರೆ ನೋಡೋಣ ಚರ್ಚೆಗೆ ಬನ್ನಿ- ಅಪ್ಪ ಮಗನಿಗೆ ಸವಾಲು ಹಾಕಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್… ಬೆಂಗಳೂರು,ನ,13,2019(..): ಹೊಸಕೋಟೆ ಬಿಜೆಪಿ ಟಿಕೆಟ್ ಕೈತಪ್ಪುವ ಸಾಧ್ಯತೆ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವ ಶರತ್ ಬಚ್ಚೇಗೌಡ ವಿರುದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕಿಡಿಕಾರಿದ್ದಾರೆ. ಅಧಿಕಾರಕ್ಕಾಗಿ ಯಾರು ಸ್ವಾರ್ಥರಾಗಿದ್ದಾರೆ. 40 ವರ್ಷಗಳಲ್ಲಿ ಏನೇನು ಕೆಲಸಗಳನ್ನ ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಸಂಸದ ಬಚ್ಚೇಗೌಡ ಮತ್ತು ಅವರ ಮಗ ಶರತ್ ಬಚ್ಚೇಗೌಡಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸವಾಲು ಹಾಕಿದ್ದಾರೆ. ಇಂದು ಮಾಧ್ಯಮದ ಜತೆ ಮಾತನಾಡಿದ ಎಂಟಿಬಿ ನಾಗರಾಜ್, ನಾಮಪತ್ರ ಸಲ್ಲಿಕೆಯ ಕೊನೆವರೆಗೂ ಕಾಯುತ್ತೇನೆ. ಯಾರು ಕೊಟ್ಟ ಮಾತು ತಪ್ಪುತ್ತಾರೆ ನೋಡುತ್ತೇನೆ. ಬಿಜೆಪಿ ನನ್ನ ಬೆನ್ನಿಗೆ ನಿಲ್ಲುತ್ತೆ ನಿಲ್ಲಬೇಕು. ಅಪ್ಪ ಮಗ ಸೀಟು ಬಿಟ್ಟುಕೊಡುವುದಾಗಿ ಒಪ್ಪಿದ್ದರು. ನಾನು ಅವರ ಮುಖವನ್ನ ದರ್ಶನ ಮಾಡಿಲ್ಲ ಎಂದರು. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿಲ್ಲ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಎಂಟಿಬಿ ನಾಗರಾಜ್ ತಿಳಿಸಿದರು. : - – - - –