ಗಂಗೂಬಾಯಿ ಹಾನಗಲ್ ಸಂಗೀತ ವಿವಿ ದಶಮಾನೋತ್ಸವ ಕಾರ್ಯಕ್ರಮ: ನಾದಬ್ರಹ್ಮ ಹಂಸಲೇಖ ಭಾಗಿ… ಮೈಸೂರು,ನ, 12,2019(..): ಮೈಸೂರಿನಲ್ಲಿರುವ ಗಂಗೂಬಾಯಿ ಹಾನಗಲ್ ಸಂಗೀತ ವಿವಿಯ ದಶಮಾನೋತ್ಸವ ವರ್ಷಾಚರಣೆ ಕಾರ್ಯಕ್ರಮ ನಡೆಯುತ್ತಿದ್ದು ನಾದಬ್ರಹ್ಮ ಹಂಸಲೇಖ ಭಾಗಿಯಾಗಿದ್ದಾರೆ. ಗಂಗೂಭಾಯಿ ಹಾನಗಲ್ ಸಂಗೀತ ವಿವಿ ಆವರಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಸಂಗೀತ ವಿವಿಯ ದಶಮಾನೋತ್ಸವ ವರ್ಷಾಚರಣೆ ಕಾರ್ಯಕ್ರಮ ನಡೆಯಲಿದೆ. ನಗಾರಿ ಬಡಿಯುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಂಗೀತ ವಿವಿ ದಶಮಾನೋತ್ಸವ ಹಿನ್ನೆಲೆ ಅಂತರಾಷ್ಟ್ರೀಯ ಕಾರ್ಯಗಾರ ಹಾಗೂ ವಿಚಾರ ಸಂಕಿರಣವನ್ನ ಆಯೋಜಿಸಲಾಗಿದೆ. ನಟನೆ ಕುರಿತು ಅಂತರಾಷ್ಟ್ರೀಯ ಕಾರ್ಯಗಾರ ಮತ್ತು ಧ್ವನಿ ಕಲಾಪ್ರದರ್ಶನದ ಕುರಿತು ವಿಚಾರ ಸಂಕಿರಣ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಸಂಗೀತ ವಿವಿ ಕುಲಪತಿ ಪ್ರೊ.ನಾಗರಾಜ್, ಪ್ರೊ.ಗುಂಡುಜ್ ಜಿಮ್ ಕಾಲಿಕ್, ಪ್ರೊ.ಲಾನ್ ಮೆಕ್ನಿಷ್ ಸೇರಿ ನೂರಾರು ಸಂಗೀತ ವಿವಿಯ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. : - - -