ಅಂತರಾಷ್ಟ್ರೀಯ ಮಟ್ಟದಲ್ಲೂ ರಾಕಿಂಗ್ ಸ್ಟಾರ್ ಯಶ್ ಹವಾ: ದಿ ಜೀ ಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ರಾಕಿ ಭಾಯ್ …. ಬೆಂಗಳೂರು,ನ,11,2019(..): ಅಮೇರಿಕಾದ ನ್ಯೂಯಾರ್ಕ್ ಮೂಲದ ಅಂತರಾಷ್ಟ್ರೀಯ ಜಿ ಕ್ಯೂ ಪುರುಷರ ಮಾಸ ಪತ್ರಿಕೆ, ದಿ ಜಿ ಕ್ಯೂ ಇಂಡಿಯಾ ಆಯೋಜಿಸಿದ್ದ, ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು ( 50 ) ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ. ನಿನ್ನೆ ಸಂಜೆ ಮುಂಬೈ ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರದಲ್ಲಿ ಯುವ ಮನಸುಗಳು ಸೃಷ್ಟಿಸಿದ ಸಂಚಲನ, ಬದಲಾವಣೆಗೆ ಕಾರಣವಾದ ಅವ್ರ ಯೋಚನೆ, ಯೋಜನೆಯನ್ನ ಪರಿಗಣಿಸಿ, ಭಾರತದ 50 ಶ್ರೇಷ್ಠ ಯುವ ಪ್ರಭಾವಶಾಲಿಗಳಿಗೆ ಜೀ ಕ್ಯೂ ಇಂಡಿಯಾ ಪ್ರಶಸ್ತಿಯನ್ನ ನೀಡಿ ಪುರಸ್ಕರಿಸಿದೆ. ವಿಶೇಷ ಅಂದ್ರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರೋ ಈ 50 ಯುವ ಭಾರತೀಯರು ಒಂದೇ ವೇದಿಕೆಯಲ್ಲಿ ಸೇರಿಸಿ ದಿ ಜೀ ಕ್ಯೂ ಕಾರ್ಯಕ್ರಮವನ್ನ ಮಾಡಿದೆ. ಈ ಕಾರ್ಯಕ್ರಮದ ದೊಡ್ಡ ವಿಶೇಷ ಅಂದ್ರೆ, 50 ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಭಾವ ಬೀರಿದಂತಹ ಯುವ ವ್ಯಕ್ತಿಗಳ ಸಾಲಲ್ಲಿ ಇಡೀ ಭಾರತೀಯ ಚಿತ್ರರಂಗದಿಂದ ಆಯ್ಕೆಯಾಗಿರೋದು ಏಕೈಕ ಸೂಪರ್ ಸ್ಟಾರ್ ಅದು ನಮ್ಮ ರಾಕಿಂಗ್ ಸ್ಟಾರ್ ಯಶ್ ಭಾರತೀಯ ಚಿತ್ರೋದ್ಯಮದಲ್ಲಿ ಸಂಚಲನ ಸೃಷ್ಟಿಸಿದ ರಾಕಿಂಗ್ ಸ್ಟಾರ್: ಕೆ.ಜಿ.ಎಫ್ ನಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರಿದ ಯಶ್ ಕೆ.ಜಿ.ಎಫ್ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವ್ರು, ರಾಷ್ಟ್ರಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಿದ ಛಾಪು, ಭಾರತೀಯ ಚಿತ್ರರಂಗದಲ್ಲಿ ಮೂಡಿಸಿದ ಸಂಚಲನ. ಚೊಚ್ಚಲ ಬಹುಭಾಷಾ ಚಿತ್ರದಿಂದ ಬಾಕ್ಸ್ ಆಫೀಸ್ ನಲ್ಲಿ 250ಕೋಟಿ ಗಳಿಸಿ ಮಾಡಿದ ದಾಖಲೆ. ಒಬ್ಬ ರಿಜಿನಲ್ ಸ್ಟಾರ್ ಆಗಿ ಇಡೀ ದೇಶದ ಸಿನಿಮಾ ಮಾರುಕಟ್ಟೆಯನ್ನ ಕ್ರಮಿಸಿದ ರೀತಿ ಇಡೀ ದೇಶದ ಚಿತ್ರೋದ್ಯಮಗಳಿಗೆ ಮಾದರಿಯಾಗಿದೆ. ಅದ್ರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ದೊರಕಿಸಿಕೊಟ್ಟಿದ್ದಾರೆ. ಹಳೇ ಪರಿಹಾಸವನ್ನ ಬದಲಾಯಿಸಿ ಹೊಸ ಇತಿಹಾಸವನ್ನ ಬರೆದು, ಕನ್ನಡ ಚಿತ್ರೋದ್ಯಮದ ಭವ್ಯ ಭವಿಷ್ಯಕ್ಕೆ ನಾಂದಿ ಹಾಡಿದ್ದಾರೆ. ಕನ್ನಡ ಸಿನಿಮಾ ಮಾರುಕಟ್ಟೆ ಸಣ್ಣದು ಅಂತ ಮಾತನಾಡ್ತಿರೋ ಸಂದರ್ಭದಲ್ಲಿ ಅದು ಸಣ್ಣದಲ್ಲ.. ವಿಶ್ವಮಟ್ಟದಲ್ಲಿ ಮೇಳೈಸುವಷ್ಟು ದೊಡ್ಡದು ಅನ್ನೋದನ್ನ ಸಾಬೀತು ಮಾಡಿ ತೋರಿಸಿದ್ದಾರೆ. ಮಾಡೋ ಯೋಚನೆ ದೊಡ್ಡದಾಗಿರ್ಬೇಕು.. ಯೋಚನೆಗೆ ತಕ್ಕಂತೆ ಯೋಜನೆನೂ ದೊಡ್ಡದಾಗಿರ್ಬೇಕು.. ಆಗ ಆ ಪ್ರಮಾಣಿಕ ಪ್ರಯತ್ನಕ್ಕೆ ಪ್ರತಿಫಲ ದೊಡ್ಡದಾಗಿಯೇ ಸಿಗುತ್ತೆ. ನಾವು ಕನ್ನಡಿಗರು ಯಾರಿಗೇನು ಕಮ್ಮಿಯಿಲ್ಲ. ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದ ಶ್ರೇಷ್ಠ ಗುಣಮಟ್ಟದ ಸಿನಿಮಾ ಸಂಸ್ಕೃತಿ ನಮ್ಮಲ್ಲೂ ಇದೆ ಅನ್ನೋದನ್ನ ಮಾಡಿ, ತೋರಿಸಿ, ಮೆಚ್ಚಿಸಿ, ಗೆದ್ದಿರೋ ರಾಕಿಂಗ್ ಸ್ಟಾರ್ ಯಶ್ ಅವ್ರ ದೃಷ್ಟಿಕೋನಕ್ಕೆ, ನಿಷ್ಠೆಯ ಶ್ರಮಕ್ಕೆ, ಶ್ರೇಷ್ಠ ಪ್ರಯತ್ನಕ್ಕೆ ಇವತ್ತು ಇಡೀ ಸಿನಿ ಜಗತ್ತು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ. ಸಿನಿಮಾ ಮೂಲಕ ಇಡೀ ಚಿತ್ರೋದ್ಯಮದ ಮೇಲೆ ರಾಕಿಂಗ್ ಸ್ಟಾರ್ ಯಶ್ ಅವ್ರು ಬೀರಿರೋ ಈ ಪ್ರಭಾವವನ್ನ ಪರಿಗಣಿಸಿ, 19 ದೇಶಗಳಲ್ಲಿ ಜನಪ್ರಿಯತೆಯನ್ನ ಪಡೆದುಕೊಂಡಿರೋ ಅಂತರಾಷ್ಟ್ರೀಯ ಮಟ್ಟದ ದಿ ಜೀ ಕ್ಯೂ ಮಾಸ ಪತ್ರಿಕೆ ಆಯೋಜಿಸಿದ್ದ ದಿ ಜೀ ಕ್ಯೂ ಇಂಡಿಯಾ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು ಪ್ರಶಸ್ತಿ ಪಟ್ಟಿಯಲ್ಲಿ, ರಾಕಿಂಗ್ ಸ್ಟಾರ್ ಯಶ್ ಅವ್ರಿಗೆ 2019ರ ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವ ಶಾಲಿ ಯುವ ಭಾರತೀಯ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ. ಕರಣ್ ಜೋಹಾರ್ ರಿಂದ ರಾಕಿಂಗ್ ಸ್ಟಾರ್ ಗೆ ಪ್ರಶಸ್ತಿ ಪ್ರಧಾನ… ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಬಾಲಿವುಡ್ ನ ಸ್ಟಾರ್ ಡೈರೆಕ್ಟರ್, ಪ್ರಡ್ಯೂಸರ್ ಕರಣ್ ಜೋಹಾರ್ ರವರು, ಜೀ ಕ್ಯೂ 2019ರ 50 ಪ್ರಭಾವಶಾಲಿ ಯುವ ಭಾರತೀಯರ ಸಾಲಲ್ಲಿ ಸಿನಿಮಾ ಕ್ಷೇತ್ರದ ಅತ್ಯಂತ ಪ್ರಭಾವ ಶಾಲಿ ಯುವ ಸೂಪರ್ ಸ್ಟಾರ್ ರಾಕಿಂಗ್ ಸ್ಟಾರ್ ಗೆ ಪ್ರಶಸ್ತಿ ಪತ್ರವನ್ನ ನೀಡಿ ಗೌರವಿಸಿದ್ರು.. : - - 50 - -