ನಾಳೆ ರಾತ್ರಿಯೇ ‘ಕೈ’ ಅಭ್ಯರ್ಥಿಗಳ ಹೆಸರು ಫೈನಲ್- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ… ವಿಜಯಪುರ,ನ,12,2019(..): ನಾಳೆ ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ತೀರ್ಪು ಹೊರ ಬೀಳಲಿದೆ. ಹೀಗಾಗಿ ನಾಳೆ ತೀರ್ಪು ಬಂದ ಬಳಿಕ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು. ವಿಜಯಪುರದಲ್ಲಿ ಇಂದು ಮಾತನಾಡಿದ ದಿನೇಶ್ ಗುಂಡೂರಾವ್, ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ಯಾವುದೇ ಮನಸ್ತಾಪ ಉಂಟಾಗಿಲ್ಲ. ನಾಳೆ ಅನರ್ಹ ಶಾಸಕರ ತೀರ್ಪು ನೋಡಿಕೊಂಡು ನಂತರ ಅಭ್ಯರ್ಥಿಗಳನ್ನ ಫೈನಲ್ ಮಾಡುತ್ತೇವೆ ಎಂದು ಹೇಳಿದರು. ಬಿಜೆಪಿಯವರಿಗೆ ನೀತಿ ನಿಯಮ ಇಲ್ಲ. ಪಕ್ಷಾಂತರ ಅವರ ಕೆಲಸ. ಈಗ ಜನರೇ ಅವರ ವಿರುದ್ದ ತಿರುಗಿ ಬಿದ್ದಿದ್ದಾರೆ. ಅನರ್ಹ ಶಾಸಕರಿಗೆ ನೀಡಿದ್ದ ಭರವಸೆಯನ್ನ ಅವರು ಈಡೇರಿಸಿಲ್ಲ. ಮೂರು ದಿನಗಳಲ್ಲಿ ಸಚಿವ ಸ್ಥಾನ ನೀಡುವುದಾಗಿ ಹೇಳಿ ಈಗ ಅವರನ್ನ ಅತಂತ್ರ ಸ್ಥಿತಿಗೆ ತಂದಿದ್ದಾರೆ ಎಂದು ಲೇವಡಿ ಮಾಡಿದರು. ಹಾಗೆಯೇ ಮಹಾರಾಷ್ಟ್ರದಲ್ಲಿ ಶೀವಸೇನೆ ಜತೆ ಕೈ ಜೋಡಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಈ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನಿಸುತ್ತೆ. ಬಿಜೆಪಿಯವರ ಸರ್ವಾಧಿಕಾರಿ ಧೋರಣೆಯಿಂದ ಶಿವಸೇನೆ ಬಿಜೆಪಿ ಜತೆ ಮೈತ್ರಿ ಕಟ್ ಮಾಡಿಕೊಂಡಿದೆ ಎಂದರು. : - - - - - .