ಐಸಿಸಿ ರ‍್ಯಾಂಕಿಂಗ್ ನಲ್ಲಿ ದೀಪಕ್ ಚಾಹರ್ ‘ಬಂಪರ್’ ! ನವದೆಹಲಿ, ನವೆಂಬರ್ 12, 2019 (..): ಬೌಲರ್ ದೀಪಕ್ ಚಾಹರ್ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭಾರಿ ಬಡ್ತಿ ಪಡೆದಿದ್ದಾರೆ. ಬೌಲರ್‌ಗಳ ವಿಭಾಗದಲ್ಲಿ 88 ಸ್ಥಾನಗಳ ಏರಿಕೆ ಕಂಡಿರುವ ಅವರು ಈಗ 42ನೇ ರ‍್ಯಾಂಕ್ ಹೊಂದಿದ್ದಾರೆ. ನಾಗಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಚಾಹರ್ 3.2 ಓವರ್‌ಗಳಲ್ಲಿ 7 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಇದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಸಾಧನೆಯಾಗಿದೆ. ಚುಟುಕು ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಮೊದಲ ಬೌಲರ್‌ ಎಂಬ ದಾಖಲೆಯನ್ನೂ ಅವರು ತಮ್ಮದಾಗಿಸಿಕೊಂಡರು.