ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ರೌಡಿ ಶೀಟರ್ ಗಳು ಅರೆಸ್ಟ್…. ಬೆಂಗಳೂರು,ನ,10,2019(..): ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ರೌಡಿಶೀಟರ್ ಗಳನ್ನ ಬೆಂಗಳೂರಿನ ಹೆಚ್ಎಎಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸದ್ಧಾಂಹುಸೇನ್ ಮತ್ತು ಅಜಂ ಪಾಷಾ ಬಂಧಿತ ಆರೋಪಿಗಳು. ಬಂಧಿತ ಇಬ್ಬರು ಆರೋಪಿಗಳು ರೌಡಿಜಂ ಜತೆ ಗಾಂಜಾ ವ್ಯವಹಾರ ನಡೆಸುತ್ತಿದ್ದರು. ಇಮ್ರಾನ್ ಬಳಿ ಗಾಂಜಾ ಖರೀದಿಸಿ ಅದನ್ನ ಸಿಗರೇಟ್ ನಲ್ಲಿ ತುಂಬಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಹೆಚ್.ಎಎಲ್ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಬ್ಬರನ್ನ ಬಂಧಿಸಿದ್ದಾರೆ. ಬಂಧಿತರಿಂದ 15 ಕೆಜಿ ಗಾಂಜಾ ಮತ್ತು ಕಾರನ್ನ ವಶಕ್ಕೆ ಪಡೆದಿದ್ದಾರೆ. ಹೆಚ್.ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - – - -