#ಅಯೋಧ್ಯಾ_ತೀರ್ಪು: ಶಿಯಾ ವಕ್ಫ್​ ಮಂಡಳಿ ಸಲ್ಲಿಸಿದ್ದ ಎಸ್​ಎಲ್​​ಪಿ ವಜಾ ನವದೆಹಲಿ, ನವೆಂಬರ್ 09, 2019 (..): ಅಯೋಧ್ಯಾ ತೀರ್ಪುನ್ನು ನ್ಯಾಯಮೂರ್ತಿಗಳು ಓದುತ್ತಿದ್ದು, ಸಾಕಷ್ಟು ವಿವರಗಳನ್ನು ನೀಡುತ್ತಿದ್ದಾರೆ. ಶಿಯಾ ವಕ್ಫ್​ ಮಂಡಳಿ ಸಲ್ಲಿಸಿದ್ದ ಎಸ್​ಎಲ್​​ಪಿ ವಜಾ ಮಾಡಿ ನ್ಯಾಯಮೂರ್ತಿಗಳು ಆದೇಶ ಹೊರಡಿಸಿದ್ದಾರೆ. ಇಲ್ಲಿದೆ ತೀರ್ಪಿನ ಟೈಮ್ ಲೈನ್…. 10.50:12ನೇ ಶತಮಾನದಲ್ಲಿ ಇಲ್ಲಿ ದೇಗುಲ ಇತ್ತು ಎಂಬುದು ಉತ್ಖನನದ ವೇಳೆ ಸ್ಪಷ್ಟವಾಗಿದೆ. ಮಸೀದಿಯ ಅಡಿಪಾಯದ ಕೆಳಗೆ ಇರುವ ರಚನೆ ಇಸ್ಲಾಮಿಕ್​ಗೆ ಸಂಬಂಧಪಟ್ಟದ್ದು ಆಗಿರಲಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ ಮುಖ್ಯನ್ಯಾಯಮೂರ್ತಿ. 10.46:ರಾಮಮಂದಿರ ಧ್ವಂಸ ಮಾಡಿ ಬಾಬರಿ ಮಸೀದಿ ಕಟ್ಟಲಾಗಿತ್ತು ಎಂದು ವರದಿ ನೀಡಿದ್ದ ಪುರಾತತ್ವ ಇಲಾಖೆಯೆ ವಾದಕ್ಕೆ ಮನ್ನಣೆ ನೀಡಿದ ಸುಪ್ರೀಂಕೋರ್ಟ್​. 10.43:ನಿರ್ಮೋಹಿ ಆಖಾಡದ ಅರ್ಜಿ ವಜಾ, ರಮಲಲ್ಲಾ ಅರ್ಜಿ ಮಾನ್ಯ ಮಾಡಿದ ಸುಪ್ರೀಂಕೋರ್ಟ್​ 10. 41:ರಂಜನ್​ ಗೊಗೊಯ್​: ಮಸೀದಿಯನ್ನು ಮೊಘಲ್​ ದಂಡನಾಯಕ ಮೀರ್​ ಬಾಕಿ ಕಟ್ಟಿದ್ದಾನೆಂದು ವಾದಿಸಲಾಗಿತ್ತು. ಹೀಗಾಗಿ ಅದು ಧಾರ್ಮಿಕ ಕ್ಷೇತ್ರದ ವ್ಯಾಪ್ತಿಗೆ ಬರುವುದಿಲ್ಲ. 10. 35:1946 ರ ಫೈಜಾಬಾದ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಶಿಯಾ ವಕ್ಫ್ ಮಂಡಳಿ ಸಲ್ಲಿಸಿದ್ದ ಎಸ್‌ಎಲ್‌ಪಿ(ಸಿಂಗಲ್ ಲೀವ್​ ಪಿಟಿಷನ್​)ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್​